ಜೊಯಿಡಾ: ಸರಕಾರಿ ಪ್ರೌಢಶಾಲೆ ಬಾಪೇಕ್ರಾಸ್‌ನಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ದಿನೇಶ ಶೇಟ್ ಇವರ ಬೀಳ್ಕೊಡುಗೆ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ವೀಣಾ ದೇಸಾಯಿ, ನದಿ ಭಟ್ಟ, ನಮಿತಾ ತೆಲೋಲ್ಕರ್, ಪ್ರಿಯಾಂಕ ಅರ್ಕೋಡೆಕರ್ ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ದಿನೇಶ ಶೇಟ್ ಅವರು ಸರಕಾರಿ ಪ್ರೌಢಶಾಲೆ ಬಾಪೇಕ್ರಾಸ್‌ನಲ್ಲಿ 5 ವರ್ಷ 6 ತಿಂಗಳು ಸೇವೆ ಸಲ್ಲಿಸಿ, ಶಿರಸಿ ಕ್ಷೇತ್ರ ಸಮನ್ವಯಾಧಿಕಾರಿ ವರ್ಗಾವಣೆಗೊಂಡರು. ಈ ಸಮಾರಂಭದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಅರುಣ ಭಟ್, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬಗಾರ, ನಾಗೋಡಾ ಗ್ರಾಮ ಪಂಚಾಯಿತ ಸದಸ್ಯ ಶ್ರೀಧರ ದಬಗಾರ, ಬಾಪೇಲಿಕ್ರಾಸ್ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ಬಾಬಲ ಕುಶಲಕರ, ಕಾಡುಮನೆ ಹೊಮ್ ಸ್ಟೆ ಮಾಲಕರಾದ ನರಸಿಂಹ ಛಾಪಖಂಡ, ರಫಿಕ್ ಖಾನ್ ಉಪಸ್ಥಿತರಿದ್ದರು. ಸರಕಾರಿ ಪ್ರೌಢಶಾಲೆ ಬಾಪೇಲಿಕ್ರಾಸ್ ಗೆ ನೂತನವಾಗಿ ಮುಖ್ಯ ಶಿಕ್ಷಕರಾಗಿ ಬಂದ ಸುಜಾತಾ ಶೆಟ್ಟಿ ಇವರನ್ನು ಸ್ವಾಗತಿಸಲಾಯಿತು.
ಬಾಪೇಲಿ ಕ್ರಾಸ್ ಪ್ರೌಢಶಾಲೆಯಲ್ಲಿ ಬೀಳ್ಕೊಡುಗೆ, ಗೌರವ ಸನ್ಮಾನ
