• first
  second
  third
  Slide
  Slide
  previous arrow
  next arrow
 • ಹಾಲು ಉತ್ಪಾದಕರಿಂದ ಖರೀದಿ ದರ ಏರಿಕೆಗೆ ತಡೆ: ನ.20ರ ನಂತರ ತೀರ್ಮಾನ

  300x250 AD

  ಶಿರಸಿ: ರಾಜ್ಯಾದ್ಯಂತ ನಂದಿನಿ ಹಾಲಿನ ದರ ಏರಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆ ನೀಡಿದ್ದು, ನ.20ರ ನಂತರ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿರುವ ಹಿನ್ನಲೆಯಲ್ಲಿ ಹಾಲು ಉತ್ಪಾದಕರಿಗೆ ನೀಡಲು ಸಮ್ಮತಿಸಿದ್ದ ಹಾಲಿನ ಹೆಚ್ಚುವರಿ ಖರೀದಿ ದರ 3 ರೂಪಾಯಿ ತಡೆಹಿಡಿದಿದ್ದು, ನ.20 ರ ನಂತರ ಚರ್ಚಿಸಿ ನೂತನ ದರ ಅನುಷ್ಠಾನಕ್ಕೆ ತರಲಾಗುವುದು ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ತಿಳಿಸಿದ್ದಾರೆ.

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಹೈನುಗಾರರ ಪರವಾಗಿ ನಿರ್ಣಯ ಕೈಗೊಳ್ಳುವ ಭರವಸೆಯಿದೆ. ಆ ನಿಟ್ಟಿನಲ್ಲಿ ಹಾಲು ಒಕ್ಕೂಟವೂ ಸಹ ಪ್ರಯತ್ನ ನಡೆಸಲಿದೆ. ಸರಕಾರದ ಅಂತಿಮ ನಿರ್ಣಯದ ನಂತರ ನೂತನ ದರ ಅನುಷ್ಠಾನಕ್ಕೆ ಬರುವುದು ಎಂದು ಅವರು ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top