ಕುಮಟಾ : ಕೊಂಕಣ ಎಜುಕೇಶನ್ ಟ್ರಸ್ಟ್ ಸರಸ್ವತಿ ಪಿಯು ಕಾಲೇಜಿನಲ್ಲಿ ವಿಧಾತ್ರಿ ಅಕಾಡೆಮಿ ಸಹಯೋಗದಲ್ಲಿ ನ.12 ರಂದು ಪಿಯು ವಿದ್ಯಾರ್ಥಿಗಳ ತಾಲೂಕು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸರಸ್ವತಿ ಪಿಯು ಕಾಲೇಜಿನ ಅರ್ಹ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪಿಯುಸಿ ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅದ್ವೈತ್ ಕಡ್ಲೆ ಮತ್ತು ರಾಘವೇಂದ್ರ ನಾಯ್ಕ್, ಇಂಗ್ಲಿಷ್ ಪ್ರಬಂಧದಲ್ಲಿ ಆಂಡ್ರಿಯಾ ವಲ್ಲಾಡೊ, ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಅನಿಶಾ ನಾಯ್ಕ್, ಇಂಗ್ಲೀಷ್ ಚರ್ಚಾ ಸ್ಪರ್ಧೆಯಲ್ಲಿ ಆಂಡ್ರಿಯಾ ಗೊನ್ಸಾಲ್ವೆಸ್, ಚಿತ್ರಕಲೆಯಲ್ಲಿ ಸೋನಾಲಿ ಶೇಟ್, ಆಶುಭಾಷಣದಲ್ಲಿ ಮನಲ್ ಶೇಖ್ ಪ್ರಥಮ ಸ್ಥಾನ ಪಡೆದಿದ್ದಾರೆ. ಜಾನಪದ ಗೀತೆಯಲ್ಲಿ ಗ್ರೀಷ್ಮಾ ಗಾವಡಿ ದ್ವಿತೀಯ, , ಮೊನೊ ಅಭಿನಯದಲ್ಲಿ ಶಿವಾನಿ ಎಂ.ನಾಯ್ಕ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಹುಲ್ ಶಾನಭಾಗ್, ಪ್ರಾಪ್ತಿ ನಾಯಕ್,ಇಂಗ್ಲೀಷ್ ಚರ್ಚಾ ಸ್ಪರ್ಧೆಯಲ್ಲಿ ಬಿ.ಎಂ.ಅನುಷಾ, ಭಕ್ತಿಗೀತೆ ಪೂರ್ವಾ ನಾಯ್ಕ್, ಆಶು ಭಾಷಣದಲ್ಲಿ ಅನನ್ಯಾ ನಾಯ್ಕ್, ಮೊನೊ ಆಕ್ಟಿಂಗ್ ಶುಭಾ ನಾಯ್ಕ್., ಜಾನಪದ ಗೀತೆ ಅಕ್ಷತಾ ಭಟ್ ಪ್ರಥಮ ಸ್ಥಾನ ಕಾಯ್ದಿರಿಸಿದ್ದಾರೆ. ಎನ್.ಆರ್.ಸಿಂಚನ ದ್ವಿತೀಯ, ಚಿತ್ರಕಲೆಯಲ್ಲಿ ಚಿನ್ಮಯ್ ನಾಯ್ಕ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್, ವಿಧಾತ್ರಿ ಅಕಾಡೆಮಿ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಂಶುಪಾಲ ಕಿರಣ್ ಭಟ್, ಉಪಪ್ರಾಂಶುಪಾಲೆ ಸುಜಾತಾ ಹೆಗಡೆ, ಸಾಂಸ್ಕೃತಿಕ ಸಮಿತಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.