• first
  second
  third
  Slide
  Slide
  previous arrow
  next arrow
 • ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ: ನಾಲ್ವರಿಗೆ ಗಾಯ

  300x250 AD

  ದಾಂಡೇಲಿ: ನಗರದ ಸೋಮಾನಿ ವೃತ್ತದಲ್ಲಿ ದ್ವಿಚಕ್ರ ವಾಹನಗಳೆರಡು ಪರಸ್ಪರ ಮುಖಾಮಿಖಿ ಡಿಕ್ಕಿಯಾಗಿ ಎರಡು ದ್ವಿಚಕ್ರ ವಾಹನದಲ್ಲಿದ್ದ ನಾಲ್ವರಿಗೂ ಗಾಯವಾಗಿದ್ದು, ದ್ವಿಚಕ್ರ ವಾಹನದಲ್ಲಿದ್ದ ಎರಡು ವರ್ಷದ ಪುಟ್ಟ ಕಂದಮ್ಮ ಪವಾಡ ಸದೃಶ್ಯವಾಗಿ ಪಾರಾದ ಘಟನೆ ಸೋಮವಾರ ನಡೆದಿದೆ.
  ಜೆ.ಎನ್.ರಸ್ತೆಯಿಂದ ಕೆ.ಎ65, ಇ 4677 ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಜೋಯಿಡಾ ತಾಲ್ಲೂಕಿನ ಮಾನಾಯಿ ಗ್ರಾಮದ ನಿವಾಸಿ 30 ವರ್ಷ ವಯಸ್ಸಿನ ಬಾಗು ಕಾಳೆ ಬೋಡ್ಕೆ ಹಾಗೂ ಅವರ ಪತ್ನಿ 28 ವರ್ಷ ವಯಸ್ಸಿನ ಧೋಂಡಿ ಬಾಗು ಬೋಡ್ಕೆ ಮತ್ತು ಅವರ 2 ವರ್ಷದ ಪುಟ್ಟ ಮಗು ಸುನೀತಾಳ ಜೊತೆ ಮಾನಾಯಿಗೆ ಹೋಗುತ್ತಿರುವ ಸಂದರ್ಭದಲ್ಲಿ ಸೋಮಾನಿ ವೃತ್ತದ ಹತ್ತಿರ ಎದುರುಗಡೆಯಿಂದ ಕೆಎ:65, ಜೆ:4959 ದ್ವಿಚಕ್ರ ವಾಹನವು ಪರಸ್ಪರ ಮುಖಾಮುಖಿ ಡಿಕ್ಕಿಯಾಗಿದೆ. ಈ ದ್ವಿಚಕ್ರ ವಾಹನದಲ್ಲಿದ್ದ ಸ್ಥಳೀಯ ನವಗ್ರಾಮದ 19 ವರ್ಷ ವಯಸ್ಸಿನ ಸಾಯಿನಾಥ್ ಮತ್ತು ಹಳಿಯಾಳದ 16 ವರ್ಷ ವಯಸ್ಸಿನ ಸಂಕೇತ್ ಎಂಬಿಬ್ಬರಿಗೂ ಗಾಯವಾಗಿದೆ. ಈ ಅಪಘಾತದಲ್ಲಿ ಯಾವುದೇ ಗಾಯನೋವು ಸಂಭವಿಸದೆ ಎರಡು ವರ್ಷದ ಪುಟ್ಟ ಮಗು ಪವಾಡ ಸದೃಶ್ಯವಾಗಿ ಪಾರಾಗಿದೆ.
  ತಕ್ಷಣವೆ ಸ್ಥಳಕ್ಕಾಗಮಿಸಿದ ಸ್ಥಳೀಯ ಯುವಕ ಬಿಲಾಲ್.ಎಸ್.ಬಳ್ಳಾರಿ, ನಗರದ ಸಮಾಜ ಸೇವಕರಾದ ದಾದಾಪೀರ್ ನದೀಮುಲ್ಲಾ, ನಗರ ಸಭಾ ಸದಸ್ಯರಾದ ಮಹಾದೇವ ಜಮಾದಾರ ಅವರು ಆಟೋ ರಿಕ್ಷಾದ ಮೂಲಕ ಸ್ಥಳೀಯರ ಸಹಕಾರದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ತಕ್ಷಣವೆ ಸ್ಪಂದಿಸಿ ಚಿಕಿತ್ಸೆ ನೀಡಿದ್ದಾರೆ. ಘಟನೆ ನಡೆದ ತಕ್ಷಣವೆ ಸ್ಥಳಕ್ಕೆ ಎಎಸೈ ಮೆಹಬೂಬು ನಿಂಬುವಾಲೆ ಹಾಗೂ ಹವಾಲ್ದಾರ್ ಮಂಗಲ್ ದಾಸ್ ಅವರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top