
ಶಿರಸಿ: ಅಪ್ರತಿಮ ಸಾಹಸ ಪ್ರದರ್ಶನ ಮಾಡಿದ ಮಕ್ಕಳಿಗೆ ನೀಡುವ ಶೌರ್ಯ ಪ್ರಶಸ್ತಿಯನ್ನು ಸಿದ್ದಾಪುರ ತಾಲೂಕಿನ ಕಾನಸೂರಿನ ಕೌಸಲ್ಯಾ ವೆಂಕಟ್ರಮಣ ಹೆಗಡೆ ಇವರಿಗೆ ಬೆಂಗಳೂರಿನಲ್ಲಿ ನೀಡಿ ಗೌರವಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನ.14 ಮಕ್ಕಳ ದಿನಾಚರಣೆಯಂದು ನೀಡುವ ಕೆಳದಿ ಚೆನ್ನಮ್ಮ ರಾಜ್ಯ ಮಟ್ಟದ ಶೌರ್ಯ ಪ್ರಶಸ್ತಿಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ನೀಡಿ ಗೌರವಿಸಿದರು.
ಕಳೆದ ಒಂದು ವರ್ಷದ ಹಿಂದೆ ಮಾವಿನಗುಂಡಿ ಸಮೀಪದ ಹಳ್ಳಿಯೊಂದರಲ್ಲಿ ಅಡಿಗೆ ಮಾಡಲು ಹೊರಟಿದ್ದ ತಂದೆಯ ಜೀಪ್ ಪಲ್ಟಿಯಾಗಿ ತಂದೆ ವೆಂಕಟ್ರಮಣ ಹೆಗಡೆ ಜೀಪಿನ ಅಡಿಯಲ್ಲಿ ಸಿಲುಕಿ ಜೀವನ್ ಮರಣದ ನಡುವೆ ಹೋರಾಡುತ್ತಿದ್ದಾಗ, ಇದೇ ಸಮಯಕ್ಕೆ ತನ್ನ ಸಮಯ ಪ್ರಜ್ಞೆಯನ್ನು ಬಳಸಿ ತನಗೆ ಸಣ್ಣ ಪುಟ್ಟ ಗಾಯಗಳಾಗಿದ್ದರೂ ಅದನ್ನು ಲೆಕ್ಕಿಸದೆ ಎರಡು ಕಿ.ಮಿ ದೂರ ಓಡಿ ಅಲ್ಲಿಂದ ಜನರನ್ನು ಕರೆತಂದು ತನ್ನ ತಂದೆಯ ಜೀವ ರಕ಼ಿಸಿದ ಸಾಧನೆಗಾಗಿ ಈ ಶೌರ್ಯ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪಡೆದ ಬಾಲಕಿ ಕೌಸಲ್ಯಾಳಿಗೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅಭಿನಂದನೆ ಸಲ್ಲಿಸಿದ್ದಾರೆ.