• Slide
    Slide
    Slide
    previous arrow
    next arrow
  • ಕೋಟಿತೀರ್ಥದಲ್ಲಿ ಮುಳುಗಿ ಮಹಿಳೆ ಸಾವು: ಪೋಲೀಸರಿಂದ ಪರಿಶೀಲನೆ

    300x250 AD

    ಗೋಕರ್ಣ : ಇಲ್ಲಿನ ಪವಿತ್ರ ಕೋಟಿತೀರ್ಥದಲ್ಲಿ ಮುಳುಗಿ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸ್ಥಳೀಯ ನಿವಾಸಿ ಸುಧಾ ಅನಂತ ಅಡ್ವೇಕರ್ ಎಂದು ಗುರುತಿಸಲಾಗಿದ್ದು ಈಕೆ ಹೇಗೆ ನೀರಿನಲ್ಲಿ ಮುಳುಗಿದಳು ಎಂಬ ಬಗ್ಗೆ ಮಾಹಿತಿ ಸಿಗಬೇಕಿದೆ.
    ಈಕೆ ಕಳೆದ ಸುಮಾರು 20 ರಿಂದ 25 ವರ್ಷದಿಂದ ದಿನ ಬೆಳಗಿಂದ ಸಾಯಂಕಾಲದ ತನಕ ಕೋಟಿತೀರ್ಥ ಸುತ್ತುತ್ತ ಇರುತ್ತಿದ್ದಳು. ಕೋಟಿತೀರ್ಥ ಸ್ವಚ್ಚತೆಗೆ ಪ್ರಾಮಾಣಿಕ ಕಾಳಜಿವಹಿಸಿ ಸ್ನಾನ ಮಾಡುವವರು, ಬಟ್ಟೆ ತೊಳೆವವರು, ಸೋಪು ಬಳಸದಂತೆ ನೋಡಿಕೊಂಡು ನೀರು ಹಾಳಾಗದಂತೆ ನೋಡಿಕೊಂಡವರಲ್ಲಿ ಮುಂಚೂಣಿಯಲ್ಲಿದ್ದಳು.
    ಸ್ವಚ್ಚತೆ ನೋಡಿಕೊಂಡು ಅಪರಕರ್ಮ ಮಾಡಿಸಿದವರ ಬಳಿ ಪಾವತಿ ನೀಡಿ ನಿಗದಿತ ಹಣ ತೆಗೆದುಕೊಂಡು , ಯಾತ್ರಿಕರಿಗೆ ಜಾಗ್ರತೆ ಮೂಡಿಸುತ್ತ ಅತ್ಯುತ್ತಮ ಸೇವೆ ನೀಡಿ, ಹೆಸರು ಗಳಿಸಿದ್ದರು. ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top