ಶಿರಸಿ: ಯಕ್ಷಗಾನದ ಭಾಗವತರಿಗೆ ಯಕ್ಷಗಾನೀಯತೆ ಮೀರದೇ ರಂಗ ಚೌಕಟ್ಟು ಬೆಳೆಸಿ ಉಳಿಸಬೇಕಾದ ಜವಾಬ್ದಾರಿ ಇದೆ ಎಂದು ಪ್ರಸಿದ್ಧ ಅರ್ಥದಾರಿ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಹೇಳಿದರು.
ಅವರು ನಗರದ ಟಿಎಂಎಸ್ ಸಭಾಂಗಣದಲ್ಲಿ ಇಲ್ಲಿನ ಹಿಲ್ಲೂರು ಯಕ್ಷಮಿತ್ರ ಬಳಗ ಹಮ್ಮಿಕೊಂಡ ವಿದ್ವಾನ್ ಸಮ್ಮಾನ, ನೆರವು, ಪ್ರೋತ್ಸಾಹಕ ಅಭಿನಂದನೆ, ಯಕ್ಷಗಾನ ಪ್ರದರ್ಶನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಯಕ್ಷಗಾನದ ರಂಗ ಚೌಕಟ್ಟು ಮೀರಬಾರದು. ಯಕ್ಷಗಾನದ ಗಾನ ವಿಧಾನ ಇರುವುದು ನೃತ್ಯ ಪೋಷಕವಾಗಿ ಹಾಗೂ ಪ್ರಸಂಗ ಪೋಷಕವಾಗಿ. ಆದರೆ ಇದನ್ನು ಅನುಸರಿಸುವದು ಬಿಟ್ಟು ಆಲಾಪ ಹೆಚ್ಚುತ್ತಿದೆ ಎಂದು ಆತಂಕಿಸಿದ ಅವರು, ಗಣಪತಿ ಭಟ್ಟ ಅವರು ಯಕ್ಷಗಾನದ ಗೌರವ ಹೆಚ್ಚಿಸಿದ ಭಾಗವತ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀಕ್ಷೇತ್ರ ಸಿಗಂಧೂರಿನ ಚೌಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್ಟ, ಒಬ್ಬ ಕಲಾವಿದರಾಗಿ ಇನ್ನೊಂದು ಕಲಾವಿದರ ನೋವಿಗೆ ಸ್ಪಂದಿಸುವ ಕಾರ್ಯ ದೊಡ್ಡದು ಎಂದರು.
ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಕಲಾವಿದರಾಗಿ ಸಂಘಟನೆ ಮಾಡುವದು ಹಾಗೂ ವಿಶೇಷ ಚೇತನ ಗುರುತಿಸಿ ಸಮ್ಮಾನಿಸಿದ್ದು ಅರ್ಥಪೂರ್ಣ ಎಂದರು.
ಯಲ್ಲಾಪುರ ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ಸಂಸ್ಥೆ ಅಧ್ಯಕ್ಷ, ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು, ರಮ್ಯಾ ರಾಮಕೃಷ್ಣ, ನಾಗರಾಜ ಜೋಶಿ ಸೋಂದಾ, ಗುರುಪಾದ ಭಟ್ಟ ಧೋರಣಗಿರಿ, ವಿವೇಕ ಹೆಗಡೆ ಕೊಂಡಲಗಿ, ಚಿತ್ರಾ ಹೆಗಡೆ ಇತರರು ಇದ್ದರು.
ಪ್ರಸಿದ್ಧ ಭಾಗವತ ಗಣಪತಿ ಮೊಟ್ಟೆಗದ್ದೆ ಅವರಿಗೆ ಗೌರವ ಸಮ್ಮಾನ, ಯಕ್ಷಾರಾಧಕ ರಘುಪತಿ ನಾಯ್ಕ ಹೆಗ್ಗರಣಿ ಅವರಿಗೆ ಸಹಾಯಧನದ ನೆರವು, ಊದಬತ್ತಿ ವಿನಾಯಕ ಎಂದೇ ಹೆಸರಾದ ವಿನಾಯಕ ಗಣಪತಿ
ಹೆಗಡೆ ಅವರಿಗೆ ಪ್ರೋತ್ಸಾಹಕ ಸಮ್ಮಾನ ನಡೆಯಿತು.
ಸಮಾರಂಭಕ್ಕೂ ಮೊದಲು ಕೃಷ್ಣ ಸಂಧಾನ- ಕರ್ಣಭೇದನ ತಾಳಮದ್ದಲೆಯನ್ನು ಯಕ್ಷಗೆಜ್ಜೆ ತಂಡ ನಡೆಸಿಕೊಟ್ಟಿತು. ಹಿಮ್ಮೇಳದಲ್ಲಿ ಗಜಾನನ ಭಟ್ಟ ತುಳಗೇರಿ, ಮಂಜುನಾಥ ಹೆಗಡೆ ಕಂಚಿಮನೆ, ಅರ್ಥದಾರಿಗಳಾಗಿ ನಿರ್ಮಲಾ ಹೆಗಡೆ ಗೋಳಿಕೊಪ್ಪ, ಲತಾ ಗಿರಿಧರ ಹೊನ್ನೆಗದ್ದೆ, ರೋಹಿಣಿ ಹೆಗಡೆ, ರೇಣುಕಾ ನಾಗರಾಜ, ಸಂಧ್ಯಾ ಅಜಯ್, ಸ್ಮಿತಾ ಭಟ್ಟ, ಜ್ಯೋತಿ ಭಟ್ ಪಾಲ್ಗೊಂಡರು.
ಸಭಾ ಕಾರ್ಯಕ್ರಮದ ಬಳಿಕ ‘ಭಕ್ತ ಸುಧನ್ವ’ ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಗಣಪತಿ ಭಟ್ಟ ಮೊಟ್ಟೆಗದ್ದೆ, ರಾಮಕೃಷ್ಣ ಹೆಗಡೆ, ಅನಿರುದ್ಧ
ಹೆಗಡೆ ವರ್ಗಾಸರ, ಪ್ರಸನ್ನ ಭಟ್ಟ ಹೆಗ್ಗಾರ ಪಾಲ್ಗೊಂಡರು. ಮುಮ್ಮೇಳದಲ್ಲಿ ಶಂಕರ ಹೆಗಡೆ ನೀಲ್ಕೊಡು, ಈಶ್ವರ ನಾಯ್ಕ ಮಂಕಿ, ನಾಗರಾಜ ಭಟ್ಟ ಕುಂಕಿಪಾಲ, ಸನ್ಮಯ ಭಟ್ಟ ಮಲವಳ್ಳಿ, ಮಂಜುನಾಥ ಹೆಗಡೆ ಹಿಲ್ಲೂರು, ಕಾರ್ತಿಕ ಕಣ್ಣಿಮನೆ, ದೀಪಕ ಭಟ್ಟ ಕುಂಕಿ ಪಾಲ್ಗೊಂಡರು. ಮಾಬ್ಲೇಶ್ವರ ಗೌಡ ಹಾರೆಕೊಪ್ಪ ಪ್ರಸಾದನ ಸಹಕಾರ, ಧ್ವನಿ ವರ್ಧಕವನ್ನು ಪಿ.ಪಿ.ಹೆಗಡೆ ನೀಡಿದರು.