ಅಂಕೋಲಾ: ಗೋಖಲೆ ಸೆಂಟಿನರಿ ಕಾಲೇಜ ಹಾಗೂ ಲಯನ್ಸ ಕ್ಲಬ್ ಅಂಕೋಲಾ ಸಿಟಿಯ ಸಹಯೋಗದೊಂದಿಗೆ ದಾದಾಬಾಯಿ ನವರೋಜಿ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹದ ಅಂಗವಾಗಿ ನ.14ರಿಂದ 20ರವರೆಗೆ ಮುಂಜಾನೆ 9.30ರಿಂದ ಸಂಜೆ 5.30ರ ತನಕ ದುಡಿಮೆಯ ನಾನಾ ಮುಖಗಳು ಮತ್ತು ಶಿಕ್ಷಣದ ಹಲವಾರು ಅಪರೂಪದ ಕೋರ್ಸ್ಗಳ ಉದ್ಯೋಗ ಸಾಹಿತ್ಯ ಪ್ರದರ್ಶನ ಮತ್ತು ಮಾರ್ಗದರ್ಶನ ಕಾರ್ಯಕ್ರಮವನ್ನು ಪ್ರದರ್ಶನ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳ ನಿವೃತ್ತ ಸಹಾಯಕ ನಿರ್ದೇಶಕ ಹಾಗೂ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2022 ಪುರಸ್ಕೃತರಾದ ಯು.ಎಮ್.ಸಿರ್ಸಿಕರ್ ಇವರ ಸಂಗ್ರಾಲಯದಲ್ಲಿರುವ ದುಡಿಮೆಯ ನಾನಾ ಮುಖಗಳ ಛಾಯಚಿತ್ರಗಳ ಮತ್ತು ಶಿಕ್ಷಣದ ಹಲವಾರು ಅಪರೂಪದ ಕೋರ್ಸ್ಗಳ ಉದ್ಯೋಗ ಸಾಹಿತ್ಯಗಳನ್ನು ಪ್ರದರ್ಶಿಸಲಾಗುವುದು. SSLC, PUC, Degree ನಂತರ ಮುಂದೇನು? ಎಂಬ ವಿಷಯ ಕುರಿತು ವೃತ್ತಿ ಮಾರ್ಗದರ್ಶನವನ್ನು ನೀಡಲಾಗುವುದು ಎಂದು ಪ್ರಾಚಾರ್ಯ ಡಾ.ಅಶೋಕಕುಮರ ಎ., ಗ್ರಂಥಪಾಲಕ ಡಾ.ನಂಜು0ಡಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.