ಹೊನ್ನಾವರ: ಎಂಪಿಇ ಸೊಸೈಟಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕರಿಯರ್ ಗೈಡನ್ಸ್ ಮತ್ತು ಪ್ಲೇಸ್‌ಮೆಂಟ್ ಸೆಲ್ ವತಿಯಿಂದ ಮಹಾವಿದ್ಯಾಲಯದಲ್ಲಿ ಪ್ರತಿಷ್ಠಿತ ಆಪ್ಟಮ್ ಕಂಪನಿಯಿಂದ ಕ್ಯಾಂಪಸ್ ಆಯ್ಕೆಯ ಕುರಿತಾಗಿ ಒಂದು ದಿನದ ಸಂದರ್ಶನ ಪೂರ್ವ ತರಬೇತಿ ಕಾರ್ಯಕ್ರಮ ನಡೆಯಿತು.
ಹೊನ್ನಾವರ ತಾಲೂಕಿನ ಹಾಗೂ ಸುತ್ತಮುತ್ತಲಿನ ತಾಲೂಕುಗಳಿಂದ 60 ಬಿಎಸ್ಸಿ ಪದವೀಧರ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಮೆಡಿಕಲ್ ಕೋಡರ್ ಹುದ್ದೆಯ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಪರೀಕ್ಷೆಗಳನ್ನು ನಡೆಸಲಾಯಿತು. ಮುಂಜಾನೆಯ ಸಂದರ್ಶನ ಪೂರ್ವ ತರಬೇತಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ.ವಿಜಯಲಲಕ್ಷ್ಮಿ ಎಂ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಒಪ್ಟಮ್ ಕಂಪನಿಯಿಂದ ಹೆಡ್ ಆಫ್ ಟ್ಯಾಲೆಂಟ್ ಅಕ್ವಿಜಿಶನ್ ಕ್ಲೆಮೆಂಟ್ ಜೊಯಲ್ ಸೆಕ್ವೆರಾ, ಮೆಡಿಕಲ್ ಕೋಡಿಂಗ್‌ನ ಮ್ಯಾನೇಜರ್ ಸೆಗ್‌ಮೆಂಟ್ ಲೀಡರ್ ಸುದಿಪ್ತೋ ಕುಮಾರದಾಸ್, ಟೀಮ್ ಲೀಡರ್ ರಾಮಮೂರ್ತಿ ಎನ್., ಹಾಗೂ ಸೀನಿಯರ್ ರಿಕ್ರೂಟಿಂಗ್ ಸ್ಪೆಶಲಿಸ್ಟ್ ಮಂಜುಳಾ ಆಚಾರ್ಯ ಆಗಮಿಸಿದ್ದರು. ಕರಿಯರ್ ಗೈಡೆನ್ಸ್ ಸೆಲ್‌ನ ಸಂಚಾಲಕ ಸಂಜೀವ ನಾಯಕ ಸ್ವಾಗತಿಸಿದರು. ಯೂನಿಯನ್ ಸಲಹೆಗಾರ ಸಂತೋಷ ಗುಡಿಗಾರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಪರೀಕ್ಷಾರ್ಥಿಗಳು ತಮ್ಮ ಸಂತೋಷವನ್ನು ಹಂಚಿಕೊಂಡು ಕೊನೆಯವರೆಗೂ ಆಸಕ್ತಿಯಿಂದ ಭಾಗವಹಿಸಿ ಪರೀಕ್ಷೆಯನ್ನು ಎದುರಿಸಿ ಇದರ ಪ್ರಯೋಜನವನ್ನು ಪಡೆದುಕೊಂಡರು.