ಕಾರವಾರ: ತಾಲೂಕಿನ ಕೆರವಡಿ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿಯಾಗಿದ್ದ ಶೋಭಾ ಕೆ.ಶಿರ್ಸಿಕರ ಅವರಿಗೆ ಹಾನಗಲ್ ಶೇಷಗಿರಿಯ ಸರಕಾರಿ ಪ್ರೌಢಶಾಲೆಯ ಮುಖೋಪಾಧ್ಯಾಯರಾಗಿ ಸೇವಾ ಬಡ್ತಿ ಹೊಂದಿದ್ದಾರೆ.
ಅವರಿಗೆ ಕೆರವಡಿ ಪ್ರೌಢಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು. ಈ ಸಮಯದಲ್ಲಿ ಮುಖೋಪಾಧ್ಯರಾದ ಜಯಾ ನಾಯಕ ಮಾತನಾಡಿ, ಶುಭ ಹಾರೈಸಿ ಸಂವಿಧಾನದ ಪುಸ್ತಕ ಹಾಗೂ ಸರಸ್ವತಿ ಮೂರ್ತಿಯನ್ನು ಕೊಟ್ಟು ಗೌರವಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರಾದ ಮಾಯಾ ಫರ್ನಾಂಡಿಸ, ಅರ್ಚನಾ ಮಾಡಗೇರಿ, ಗೀತಾ ನಾಯ್ಕ, ಸುಮತಿ ನಾಯಕ, ಜಿ.ಎಲ್.ನಾಗಲತಾ, ಸಂಜೀವ ಬಸ್ತವಾಡ, ಪ್ರಶಾಂತ ಮಳಗಿ ಮತ್ತು ಶಾಲಾ ಮಕ್ಕಳು ಹಾಗೂ ಅಡುಗೆ ಸಿಬ್ಬಂದಿಯವರು ಹಾಜರಿದ್ದು ಶುಭ ಕೋರಿದರು.
ಶೋಭಾ ಶಿರ್ಸಿಕರಗೆ ಬೀಳ್ಕೊಡುಗೆ
