Slide
Slide
Slide
previous arrow
next arrow

ನ.14ಕ್ಕೆ ಹೊಸ್ಟ ಕಟ್ಟಡ, ರಂಗ ಮಂದಿರ ಉದ್ಘಾಟನೆ: ಹಲವು ಗಣ್ಯರು ಭಾಗಿ

300x250 AD

ಶಿರಸಿ: ನಗರದ ಕೆ.ಎಚ್.ಬಿ. ಕಾಲೋನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ್ಟ ಕಟ್ಟಡಗಳ ಹಾಗೂ ರಂಗ ಮಂದಿರದ ಉದ್ಘಾಟನೆ ಮತ್ತು ಹೊಸ ಕೊಠಡಿ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮವು ನ.14,ಸೋಮವಾರದಂದು ಜರುಗಲಿದೆ.
ಕಾರ್ಯಕ್ರಮದ ಉದ್ಘಾನೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ,ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಶಿಕ್ಷಣ ಸಚಿವ ಬಿ.ಸಿ. ನಾಗೇಶ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾ ಅಧ್ಯಕ್ಷ ಗಣಪತಿ ನಾಯ್ಕ ವಹಿಸಲಿದ್ದು, ಮಾನ್ಯ ಸಂಸದರು, ನಗರಸಭೆಯ ಪದಾಧಿಕಾರಿಗಳು, ಅಧಿಕಾರಿ ವೃಂದದವರು ಉಪಸ್ಥಿತರಿರಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top