Slide
Slide
Slide
previous arrow
next arrow

ತಾಲೂಕಾ ಮಟ್ಟದ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆ ಯಶಸ್ವಿ

300x250 AD

ಶಿರಸಿ:ನಗರದ ಪ್ರತಿಷ್ಠಿತ ಎಂ. ಇ. ಎಸ್. ಚೈತನ್ಯ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ಪದವಿ ಪೂರ್ಣ ಶಿಕ್ಷಣ ಇಲಾಖೆ ಸಹನಿರ್ದೇಶಕರು ಕಾರವಾರ ಇವರ ಸಹಯೋಗದೊಂದಿಗೆ ತಾಲೂಕಾ ಮಟ್ಟದ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಯ ಸ್ಪರ್ಧಾ ಕಾರ್ಯಕ್ರಮವು , ಯಶಸ್ವಿಯಾಗಿ ನಡೆಯಿತು.
ಸಭೆಯ ಉದ್ಘಾಟಕರಾದ ಕರ್ನಾಟಕ ಸರ್ಕಾರದ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ(ಉ.ಕ) ಉಪನಿರ್ದೇಶಕ ಹನುಮಂತ ನಿಟ್ಟೂರ ಇವರು ಕಾರ್ಯಕ್ರಮಕ್ಕೆ ಶುಭ-ಸಂದೇಶವನ್ನು ಕಳುಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಕೆ. ಎನ್. ಹೊಸ್ಮನಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಸಮಿತಿಯ ಅಧ್ಯಕ್ಷ ಕೆ.ಬಿ ಲೋಕೇಶ ಹೆಗಡೆ ವಹಿಸಿದ್ದರು. ಮಾರಿಕಾಂಬಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಬಾಲಚಂದ್ರ ಭಟ್ಟ, ಎಂ. ಇ. ಎಸ್ ಚ್ಯೆತನ್ಯ ಪಿ.ಯು. ಕಾಲೇಜು ಉಪಸಮಿತಿ ಸದಸ್ಯ ಪಾಂಡುರಂಗ ಅಣ್ಣಪ್ಪ ಪ್ಯೆ ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಡಾ. ರಾಘವೇಂದ್ರ ಹೆಗಡೆಕಟ್ಟೆ ಮುಖ್ಯ ಅತಿಥಿಗಳ ಪರಿಚಯ ಮಾಡಿ ಪ್ರಾಸ್ತವಿಕವಾಗಿ ಮಾತನಾಡಿದರು.
ಕೆ.ಎನ್. ಹೊಸಮನಿ ದೀಪ ಬೆಳಗಿಸಿ ಮಾತನಾಡುತ್ತ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ ಇಂತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಅವಶ್ಯವಾಗಿದೆ. ಇನ್ನು ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು ಕೆ. ಬಿ. ಲೋಕೇಶ ಹೆಗಡೆ ಮಾತನಾಡುತ್ತಾ ಒಳ್ಳೆಯ ನಡತೆಯ ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಿದ್ದು, ಇಂಥ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಂದ ಸಮಾಜಕ್ಕೆ ಕೊಡುಗೆಯಾಗಲಿ ಎಂದು ಹೇಳಿದರು.ಉಪನ್ಯಾಸಕ ಅನಂತಮೂರ್ತಿ ಭಟ್ಟ ಕಾರ್ಯಕ್ರಮವನ್ನು ನಿರ್ವಹಿಸಿ, ವಂದನಾರ್ಪಣೆಯನ್ನು ಮಾಡಿದರು. ಎಲ್ಲ ಬೋಧಕ-ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಾಲೂಕ ಮಟ್ಟದ 15 ಪದವಿ-ಪೂರ್ವ ಕಾಲೇಜುಗಳು ಭಾಗವಹಿಸಿ ಪ್ರತಿ ಸ್ಪರ್ಧೆಯಲ್ಲೂ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದರು. ಎಂ.ಇ.ಎಸ್. ಚೈತನ್ಯ ಪದವಿ ಪೂರ್ವ ಕಾಲೇಜು 09 ಸ್ಪರ್ಧೆಗಳಲ್ಲಿ ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು, ಅಂತೆಯೇ ಎಂ.ಇ.ಎಸ್. ಪದವಿಪೂರ್ವ ಕಾಲೇಜು 09 ಸ್ಪರ್ಧೆಗಳಲ್ಲಿ,ನಗರದ ಚಂದನ ಪದವಿ ಪೂರ್ವ ಕಾಲೇಜು 2 ಸ್ಪರ್ಧೆಗಳಲ್ಲಿ, ಕೊಳಗಿಬೀಸ್ ಸರ್ಕಾರಿ ಪದವಿ ಪೂರ್ವ ಕಾಲೇಜು 01 ಸ್ಪರ್ಧೆಯಲ್ಲಿ, ನಿಲೇಕಣಿ ಸರ್ಕಾರಿ ಪದವಿ ಪೂರ್ವ ಕಾಲೇಜು 1 ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top