ಯಲ್ಲಾಪುರ: ಉಮ್ಮಚಗಿಯಲ್ಲಿ ಇಂದು ಸಾಹಿತ್ಯಾಸಕ್ತರು ಸೇರಿರುವುದು ಸಂತಸದ ಸಂಗತಿ, ಕಾರ್ಯಕ್ರಮ ಯಶಸ್ವಿಯಾಗಲಿ ಹಾಗೂ ಮುಂದಿನ ದಿನಗಳಲ್ಲಿ ನಮ್ಮ ಊರಿನ ಇನ್ನು ಹೆಚ್ಚು ಇಂತಹ ಕಾರ್ಯಕ್ರಮ ನಡೆಯಲಿ ಎಂದು ಉಮ್ಮಚಗಿ ವ್ಯವಸಾಯ ಸೇವಾ ಸೊಸೈಟಿ ಮುಖ್ಯ ಕಾರ್ಯನಿರ್ವಾಹಕರಾದ ಆರ್.ಎಸ್.ಹೆಗಡೆ ಹೇಳಿದರು.
ಅವರು ಶುಕ್ರವಾರ ಮಧ್ಯಾಹ್ನ ಉಮ್ಮಚಗಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ, ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಹಾಗೂ ತಾಲೂಕ ಘಟಕಗಳ ಆಶ್ರಯದಲ್ಲಿ ಕನ್ನಡ ಸಂಭ್ರಮ, ಸನ್ಮಾನ ಕವಿಗೋಷ್ಠಿ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಸಾಹಿತಿ, ವೇದಿಕೆಯ ಗೌರವಾಧ್ಯಕ್ಷ ವನರಾಗ ಶರ್ಮಾ ಮಾತನಾಡಿ, ಕನಕದಾಸರ ಜಯಂತಿ ದಿನವಾದ ದಾಸ ಶ್ರೇಷ್ಠರಿಗೆ ಈ ಸಂದರ್ಭದಲ್ಲು ನಾವು ನೆನಪು ಮಾಡಿಕೊಂಡು ಮುನ್ನಡೆಯಬೇಕು. ಕಷ್ಟದ ಸಂದರ್ಭದಲ್ಲಿಯೂ ವರದಿಮಾಡುತ್ತ ಸುದ್ದಿ ನೀಡುವ ವರದಿಗಾರರಿಗೆ ಸನ್ಮಾನ ಮಾಡಿರುವುದು ಸಂಘಟನೆಗೆ ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷೆ ಶಿವಲೀಲಾ ಹುಣಸಗಿ ಮಾತನಾಡಿ, ಕನ್ನಡದ ಕೆಲಸವನ್ನು ನಿಸ್ವಾರ್ಥವಾಗಿ ಮಾಡುತ್ತ ಬಂದಿದ್ದೇವೆ. ಪತ್ರಕರ್ತರು ಹೇಗಿರುತ್ತಾರೆ ಎಂಬುದನ್ನು ಜನರಿಗೆ ತೋರಿಸುವ ಕೆಲಸ ಈ ಸನ್ಮಾನವಾಗಿದೆ ಎಂದು ಹೇಳಿದರು.
ಉಮ್ಮಚಗಿ ಗ್ರಾ.ಪಂ ಅಧ್ಯಕ್ಷೆ ರೂಪಾ ಪೂಜಾರಿ, ವಿದ್ಯಾಗಣಪತಿ ದೇವಸ್ಥಾನದ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ವೇದಿಕೆಯಲ್ಲಿದ್ದರು. ಪತ್ರಕರ್ತರಾದ ಸಿ ಆರ್ ಶ್ರೀಪತಿ, ಶ್ರೀಧರ್ ಭಟ್ಟ ಅಣಲಗಾರ, ಜಗದೀಶ ನಾಯಕ, ನರಸಿಂಹ ಸಾತೊಡ್ಡಿ, ನಾಗರಾಜ ಮದ್ಗುಣಿ, ಪ್ರಭಾವತಿ ಜಯರಾಜ, ಸುಬ್ರಾಯ ಬಿದ್ರೇಮನೆ, ನಾಗೇಶಕುಮಾರ, ಜಿ ಎನ್ ಭಟ್ಟ, ವಿಜಯಕುಮಾರ್, ರಾಜ್ಯ ಪ್ರಶಸ್ತಿ. ವಿಜೇತ ಶಿಕ್ಷಕ ಸುಧಾಕರ ನಾಯಕ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ನಾಗೇಶಕುಮಾರ ಮಾತನಾಡಿದರು.
ನಂತರ ನಡೆಯುವ ಕವಿಗೋಷ್ಠಿಯಲ್ಲಿ ರೇಣುಕಾ ಹೆಗಡೆ ಜಾಲಿಮನೆ, ರಾಘವೇಂದ್ರ ನಾಯ್ಕ, ಗ ರಾ ಭಟ್, ಪುಷ್ಪಲತಾ ನಾಯಕ, ಗಣಪತಿ ಹಾಸ್ಪುರ, ರಾಘವೇಂದ್ರ ಹೊನ್ನಾವರ, ಸುಬ್ರಮಣ್ಯ ಹಿರೆಸರ, ಸ್ವಾತಿ ಶಂಕರ ನಾಯಕ, ಗಂಗಾಧರ ಎಸ್ ಎಲ್, ಸವಿತಾ ಎಸ್ ಜಿ ಕವನ ವಾಚಿಸಿದರು. ಇದೇ ಸಂದರ್ಭದಲ್ಲಿ ಕೇಂ ಕ ಸಾ ವೇ ತಾಲೂಕಾ ಘಟಕದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಸುಮಂಗಲಾ ವೆರ್ಣೇಕರ ಪ್ರಾಸ್ತಾವಿಕಗೈದರು. ವೇದಿಕೆಯ ತಾಲೂಕಾ ಅಧ್ಯಕ್ಷೆ ಆಶಾ ಶೆಟ್ಟಿ ಸ್ವಾಗತಿಸಿದರು. ಸತೀಶ ಶೆಟ್ಟಿ ನಿರೂಪಿಸಿದರು. ಹಲಸಿನಕೊಪ್ಪ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರಾಘವೇಂದ್ರ ಹೊನ್ನಾವರ ವಂದಿಸಿದರು.