Slide
Slide
Slide
previous arrow
next arrow

ಕ್ರೀಡೆಯಿಂದ ದೈಹಿಕ, ಮಾನಸಿಕ ಸದೃಢತೆ ಸಾಧ್ಯ: ಸದಾಶಿವ

300x250 AD

ಕಾರವಾರ: ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗಿರಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಸದಾಶಿವ ಎಂ.ಎಸ್ ಹೇಳಿದರು.
ಇಲ್ಲಿನ ಕಾಜುಬಾಗದ ಪೋಲಿಸ್ ಕವಾಯತು ಮೈದಾನದಲ್ಲಿ ಗೃಹರಕ್ಷಕರ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆಯಿಂದ ಇನ್ನಷ್ಟು ಕ್ರಿಯಾಶೀಲತೆ ಮೈಗೂಡಿಸಲು ಸಾಧ್ಯ. ಇನ್ನು ಸಮಾಜದ ಹಿತಕ್ಕಾಗಿ ನಿಸ್ವಾರ್ಥದಿಂದ, ಶಿಸ್ತುಬದ್ಧವಾಗಿ ಹಗಲು ರಾತ್ರಿ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರು ಸಮಾಜದ ಬಹುದೊಡ್ಡ ಆಸ್ತಿ. ನಾವು ಅವರಿಗೆ ಋಣಿಯಾಗಿರಬೇಕು ಎಂದರು. ಕಾನೂನು ಪರಿಪಾಲನೆಯ ವಿವಿಧ ಕಾರ್ಯಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಗೃಹ ರಕ್ಷಕರ ಸೇವೆಯು ಸದಾ ಸ್ಮರಣೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಠ ದೀಪಕ ಗೋಕರ್ಣ, ಕ್ರೀಡಾಕೂಟದಲ್ಲಿ ಕ್ರೀಡಾ ಸ್ಪೂರ್ತಿಯಿಂದ ಗೃಹರಕ್ಷಕರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಜಿಲ್ಲಾ ಮಟ್ಟದಲ್ಲಿ ವಿಜೇತರಾದ 35 ಅರ್ಹ ಕ್ರೀಡಾಪಟುಗಳು ಮಂಗಳೂರಿನಲ್ಲಿ ಇದೇ 13 ರಿಂದ 15 ರವರೆಗೆ ನಡೆಯಲಿರುವ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ವಲಯ ಮಟ್ಟದಲ್ಲಿ ವಿಜೇತರಾದವರು ನ. 18 ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಉತ್ತಮ ಆಟದ ಮೂಲಕ ಜಿಲ್ಲೆಗೆ ಕೀರ್ತಿ ತರುವಂತೆ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕ್ರೀಡಾಕೂಟದ ನಿರ್ಣಾಯಕರಾದ ರಾಜಾಸಾಬ್ ಡೆಂಗಣ್ಣನವರ್, ಜೈವಂತ ನಾಗೇಕರ, ಪ್ರವೀಣ ತಳೇಕರ, ರಫೀಕ್ ಶೇಖ್, ಇಲಾಖೆ ಸಿಬ್ಬಂದಿ ಮಧು, ಮಾಯಾ ಕಾಳೆ ಹಾಗೂ ಕುಮಟಾ ಘಟಕಾಧಿಕಾರಿ ಸಿ.ಡಿ.ನಾಯ್ಕ, ಮಲ್ಲಾಪುರ ಪ್ರಬಾರಿ ಘಟಕಾಧಿಕಾರಿ ಪ್ರಭು ಮುದ್ದಕ್ಕನವರ್ ಇದ್ದರು. ಚೆಂಡಿಯಾದ ಘಟಕಾಧಿಕಾರಿ ರಾಘವೇಂದ್ರ ಗಾಂವಕರ್ ಸ್ವಾಗತಿಸಿ ನಿರೂಪಿಸಿದರು. ಕಾರವಾರ ಘಟಕದ ಎಸ್.ಕೆ.ನಾಯ್ಕ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top