• Slide
    Slide
    Slide
    previous arrow
    next arrow
  • ಪಂಚ ದೇವರ ದೊಡ್ಡ ಕಾರ್ತಿಕೋತ್ಸವ ಸಂಪನ್ನ

    300x250 AD

    ಅಂಕೋಲಾ: ತಾಲೂಕಿನ ಐತಿಹಾಸಿಕ ಪಂಚ ದೇವರ ದೊಡ್ಡ ಕಾರ್ತಿಕೋತ್ಸವವು ಸಾವಿರಾರು ಭಕ್ತರ ಕೂಡುವಿಕೆಯಲ್ಲಿ ಸಂಭ್ರಮ ಸಡಗರದಿಂದ ಜರುಗಿತು.
    ಗುರುವಾರ ಸಂಜೆಯಿಂದಲೇ ಆರಂಭವಾದ ಕಾರ್ತಿಕೋತ್ಸವ ಆಚರಣೆಯು ಪಂಚ ದೇವರಾದ ಶ್ರೀ ವೆಂಕಟರಮಣ, ಶ್ರೀ ಶಾಂತಾದುರ್ಗಾ, ಶ್ರೀ ನಾರಾಯಣ, ಶ್ರೀ ಮಹಾದೇವ, ಶ್ರೀ ಆರ್ಯದುರ್ಗಾ ದೇವರ ಪಲ್ಲಕ್ಕಿ ಅಂಕೋಲಾದಿಂದ ಅಂಬಾರಕೊಡ್ಲ ಮಾರ್ಗವಾಗಿ ಬಾಳೆಗುಳಿಯ ವನಕ್ಕೆ ಹೋಗುವ ರಮಣೀಯ ದೃಷ್ಯ ಅಂಕೋಲಾದಲ್ಲಿ ಅಜರಾಮರವೆನಿಸಿತ್ತು. ಅಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದು ವನದಲ್ಲಿ ನೆರೆದಿರುವ ಸಾವಿರಾರು ಭಕ್ತರಿಗೆ ಬೋಜನದ ವ್ಯವಸ್ಥೆ ಮಾಡಲಾಗಿತ್ತು.
    ಅಲ್ಲಿಂದ ರಾತ್ರಿ 10 ಗಂಟೆಯ ಹೊತ್ತಿಗೆ ಮತ್ತೆ ಶಿರಕುಳಿ ಮಾರ್ಗವಾಗಿ ಅಂಬಾರಕೊಡ್ಲ ಮೂಲಕ ದೇವರ ಪಲ್ಲಕ್ಕಿಗಳು ಸಹಸ್ರಸಹಸ್ರ ಜನಸ್ತೋಮದ ನಡುವೆ ಹೃದಯಸ್ಪರ್ಶಿ ಸ್ವಾಗತದೊಂದಿಗೆ ಸ್ವಾಗತಿಸಲು ರಸ್ತೆಯ ಇಕ್ಕೆಲಗಳಲ್ಲಿ ದೀಪಾಲಂಕಾರ, ತಳಿರು ತೋರಣಗಳ ಶೃಂಗಾರ ರಂಗೋಲಿಗಳ ಚಿತ್ತಾರ ರಾಜ್ಯದಲ್ಲಿಯೆ ವಿಷೇಶ ಉತ್ಸವವಿದು ಎನ್ನುವ ಹಾಗಿತ್ತು.
    ಪಂಚ ದೇವತೆಗಳನ್ನು ಪ್ರತ್ಯೇಕ ಪಲ್ಲಕ್ಕಿಗಳಲ್ಲಿ ಹೊತ್ತು ಭಕ್ತರು ಭಾವಪರವಶರಾಗಿ ರಸ್ತೆಯುದ್ದಗಲಕ್ಕೂ ಭಕ್ತರು ದೇವರಿಗೆ ಕೊಡುವ ಪೂಜೆಯನ್ನು ಅರ್ಪಿಸುತ್ತಾ ಭಕ್ತಿಯನ್ನು ಮೆರೆಯುತ್ತಿದ್ದರು. ಪಲ್ಲಕ್ಕಿಗಳಲ್ಲಿ ಬಂದ ದೇವರ ಮೂರ್ತಿಗಳನ್ನು ಶ್ರೀ ವೆಂಕಟರಮಣ, ದೇವಸ್ಥಾನದಲ್ಲಿ ರಥಕ್ಕೆ ಬದಲಿಸಿ ಮುಂಜಾನೆ ಐದು ಗಂಟೆಗೆ ಪಟ್ಟಣದಲ್ಲಿ ವಿಹಾರ ನಡೆಸಿತು. ಪಟ್ಟಣದ ದುರ್ಗಾದೇವಿ ಮಂದಿರದ ಎದುರು ಈ ಐದು ದೇವರ ರಥಗಳು ಒಟ್ಟಿಗೆ ಸೇರುವ ದೃಷ್ಯ ಮನಮೋಹಕವಾಗಿತ್ತು.
    ಈ ದೇವರ ರಥಗಳು ಶ್ರೀ ಶಾಂತಾದುರ್ಗಾ ದೇವಸ್ಥಾನದ ವರೆಗೆ ಮೆರವಣಿಗೆ ಮೂಲಕ ಕರೆತಂದು ಅಲ್ಲಿ ಭಕ್ತಾದಿಗಳು ಪೂಜಾ ಕೈಂಕರ್ಯವನ್ನು ನಡೆಸಿದರು. ಬಳಿಕ ಅಲ್ಲಿಂದ ಎಲ್ಲಾ ಪಂಚ ದೇವರು ತಮ್ಮತಮ್ಮ ಸ್ವಸ್ಥಾನಗಳಿಗೆ ತೆರಳುತ್ತವೆ. ಈ ಉತ್ಸವದಲ್ಲಿ ಅಂಕೋಲಾ ತಾಲೂಕಿನ ಸುತ್ತಹಳ್ಳಿಯ ಜನರು ಭಾಗಿಯಾಗಿ ಉತ್ಸವವನ್ನು ಚಂದಗಾಣಿಸುತ್ತಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top