• first
  second
  third
  Slide
  Slide
  previous arrow
  next arrow
 • ಬಿಜೆಪಿಯಲ್ಲಿ ಮಹತ್ವದ ಬದಲಾವಣೆ

  300x250 AD

  ಶಿರಸಿ: ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಕೆಲ ಸಂಘಟನಾತ್ಮಕ ಬದಲಾವಣೆಗಳನ್ನು ಮಾಡಿ ಆದೇಶಿಸಿದ್ದಾರೆ.
  ಬಿಜೆಪಿ ಸಿದ್ದಾಪುರ ಮಂಡಲದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜ ನಾಯ್ಕ ಬೇಡ್ಕಣಿ ಅವರನ್ನು ಜಿಲ್ಲಾ ಬಿಜೆಪಿ ಕಾರ್ಯದರ್ಶಿಯನ್ನಾಗಿ ಪದೋನ್ನತಿಗೊಳಿಸಿ ಅವರ ಸ್ಥಾನಕ್ಕೆ ಸಿದ್ದಾಪುರ ಪಟ್ಟಣ ಪಂಚಾಯತ ಸದಸ್ಯರಾದ ಮಾರುತಿ ಟಿ.ನಾಯ್ಕ ಹೊಸೂರ ಅವರನ್ನು ಸಿದ್ದಾಪುರ ಮಂಡಲದ ಅಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಲಾಗಿದೆ.
  ಅದೇ ರೀತಿ ಗುರುರಾಜ ಡಿ.ಶಾನಭಾಗ ಅವರನ್ನು ಜಿಲ್ಲಾ ವಿಶೇಷ ಆಮಂತ್ರಿತರನ್ನಾಗಿಯೂ ಹಾಗೂ ಶಿರಸಿ ಗ್ರಾಮೀಣ ಮಂಡಲದ ಪ್ರಭಾರಿಗಳನ್ನಾಗಿ ಮುಂದುವರಿಸಿ ಮುಂದಿನ ಸಂಘಟನಾತ್ಮಕ ಅವಧಿಯವರೆಗೆ ಮುಂದುವರಿಸಲಾಗಿದೆ. ಈವರೆಗೆ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾದ ನವಿನಕುಮಾರ ಅಯೋಧ್ಯಾ ಕುಮಟಾ ಅವರನ್ನು ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಸ್ಥಾನದಿಂದ ಕೈಬಿಡಲಾಗಿದೆ ಎಂದು ಆದೇಶಿಸಿರುವುದಾಗಿ ಬಿಜೆಪಿ ಜಿಲ್ಲಾ ಕಾರ್ಯಾಲಯದ ಕಾರ್ಯದರ್ಶಿ ಶ್ರೀರಾಮ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top