ಕಾರವಾರ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು 20023- 24ರ ಶೈಕ್ಷಣಿಕ ವರ್ಷಕ್ಕಾಗಿ 6ನೇ ತರಗತಿ ಮತ್ತು 9ನೇ ತರಗತಿಗಳ ಪ್ರವೇಶಕ್ಕಾಗಿ ದೇಶದಾದ್ಯಂತ 33 ಸೈನಿಕ ಶಾಲೆಗಳಲ್ಲಿ ಎಐಎಸ್‌ಎಸ್‌ಇಇ 2023 ಪ್ರವೇಶ ಪರೀಕ್ಷೆಯನ್ನು ನಡೆಸಲಿದೆ.
6ನೇ ತರಗತಿ ಪ್ರವೇಶಕ್ಕೆ ಅಭ್ಯರ್ಥಿಗಳು 31 ಮಾರ್ಚ್ 2023ರಂತೆ 10 ಮತ್ತು 12 ವರ್ಷಗಳ, ಅಂದರೆ ಅಭ್ಯರ್ಥಿ 01 ಏಪ್ರಿಲ್ 2011 ಮತ್ತು 31 ಮಾರ್ಚ್ 2013ರ ನಡುವೆ ಜನಿಸಿರಬೇಕು. 9ನೇ ತರಗತಿ ಪ್ರವೇಶಕ್ಕೆ, ಅಭ್ಯರ್ಥಿಗಳು 31 ಮಾರ್ಚ್ 2023ರಂತೆ 13 ಮತ್ತು 15 ವರ್ಷಗಳ ಅಂದರೆ ಅಭ್ಯರ್ಥಿ 01 ಏಪ್ರಿಲ್ 2008 ಮತ್ತು 31 ಮಾರ್ಚ್ 2010ರ ನಡುವೆ ಜನಿಸಿರಬೇಕು.
ಪರೀಕ್ಷೆಗಳು 08 ಜನವರಿ 2023ರಲ್ಲಿ ನಡೆಯಲಿವೆ. ಪರೀಕ್ಷಾ ಶುಲ್ಕವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.500, ಇತರೆ ಅಭ್ಯರ್ಥಿಗಳಿಗೆ ರೂ. 650 ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಸಂಬಂಧಿಸಿದ ಯೋಜನೆ, ಕಾಲವಧಿ, ಮಾಧ್ಯಮ, ಪರೀಕ್ಷೆಯ ಪಠ್ಯಕ್ರಮ, ಸೈನಿಕ ಶಾಲೆ, ಹೊಸ ಸೈನಿಕ್ ಶಾಲೆಗಳ ಪಟ್ಟಿ ಹಾಗೂ ತಾತ್ಕಾಲಿಕ ಪ್ರವೇಶ, ಸೀಟುಗಳ ಮೀಸಲು, ಪರೀಕ್ಷಾ ಕೇಂದ್ರಗಳು ಇವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್ಸೈಟ್ http://www.nta.ac.in ಮತ್ತು http://www.aissee.nta.nic.ac.in ನಲ್ಲಿ ಪಡೆಯಬಹುದು. ಅರ್ಜಿಗಳನ್ನು ಇದೇ ವೆಬ್ಸೈಟ್‌ನಲ್ಲಿ ಅಕ್ಟೋಬರ್ 21 ಮತ್ತು ನವೆಂಬರ್ 30ರೊಳಗೆ ಸಲ್ಲಿಸಬೇಕು ಎಂದು ಸೈನಿಕ್ ಶಾಲೆ ಕೊಡಗು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೈನಿಕ ಶಾಲೆಗಳ ಪ್ರವೇಶಕ್ಕೆ ಅರ್ಜಿ ಅಹ್ವಾನ
