• first
  second
  third
  Slide
  Slide
  previous arrow
  next arrow
 • ನ.14ರಂದು ದಾಂಡೇಲಿಯಲ್ಲಿ ಸರ್ವಧರ್ಮ ಸಮ್ಮೇಳನ

  300x250 AD

  ದಾಂಡೇಲಿ: ಜಮಾತ್-ಎ ಉಲಮಾ ಸಮಿತಿಯ ಆಶ್ರಯದಡಿ ನ.14ರಂದು ಸಂಜೆ 6 ಗಂಟೆಗೆ ನಗರದ ಹಳೆ ನಗರಸಭೆಯ ಮೈದಾನದಲ್ಲಿ ಸರ್ವಧರ್ಮ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ನಗರದ ಜಮಾತ್-ಎ ಉಲಮಾ ಸಮಿತಿಯ ಅಧ್ಯಕ್ಷರಾದ ಹಾಫಿಜ್ ಆಕಲಾಕ್ ಸಂಗೊಳಿಯವರು ತಿಳಿಸಿದ್ದಾರೆ.
  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಮಾತ್-ಎ ಉಲಮಾ ಸಮಿತಿಯ ಆಶ್ರಯದಲ್ಲಿ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸರ್ವಧರ್ಮ ಸಮನ್ವಯತೆ, ಶಾಂತಿ, ಭ್ರಾತೃತ್ವ, ಸಹೋದರತ್ವದ ಸಮಾಜ ನಿರ್ಮಾಣದ ಮಹತ್ವದ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಜಮಾತ್-ಎ ಉಲಮಾ ಇದರ ಅಧ್ಯಕ್ಷರಾದ ಹಜರತ್ ಮೌಲಾನಾ ಇಪ್ತಿಕಾರ್ ಅಹಮ್ಮದ್ ಸಾಹೇಬ್ ಕಾಸ್ಮಿ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದುರ್ಗಾದೇವಿ ದೇವಸ್ಥಾನ ಇಲ್ಲಿಯ ಆರಾದ್ರಿ ಮಠದ ಪೂಜ್ಯ ಮಹಂತಯ್ಯ ಸ್ವಾಮೀಜಿಯವರು, ಹಳೆದಾಂಡೇಲಿಯ ಸೈಂಟ್ ಅಂಥೋನಿ ಚರ್ಚಿನ ಧರ್ಮಗುರುಗಳಾದ ಫಾ.ಫೆಲಿಕ್ಸ್ ಲೋಬೊ ಹಾಗೂ ಇನ್ನಿತರ ಸಮಾಜದ ಗುರುಗಳು, ವಿವಿಧ ಮುಖಂಡರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹಾಫಿಜ್ ಆಕಲಾಕ್ ಸಂಗೊಳಿಯವರು ಮನವಿ ಮಾಡಿದ್ದಾರೆ.
  ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಫಿಜ ಮೌಲಾನಾ ಸಲೀಂ ಸಾಬ್, ಪ್ರಮುಖರುಗಳಾದ ಅಥಾವುಲ್ಲಾ ರೆಹಮಾನ್, ಮಹಮ್ಮದ್ ರಫೀಕ್, ಅಬ್ದುಲ್ ರೆಹಮಾನ್, ಕಮರೆ ಅಲಾಂ, ಸೈಯಿದ್, ಅಬ್ದುಲ್ ಮನ್ನಾನ್, ನದೀಂ ಮೊದಲಾದವರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top