• Slide
    Slide
    Slide
    previous arrow
    next arrow
  • ಅಸಮಾನತೆಯನ್ನು ಹೊರಹಾಕಲು ಪ್ರಯತ್ನಿಸಿದವರು ಕನಕದಾಸರು: ಉಪತಹಶಿಲ್ದಾರ ಶ್ರೀಧರ್

    300x250 AD

    ಶಿರಸಿ: ದಾಸ ಶ್ರೇಷ್ಠ ಭಕ್ತ ಕನಕದಾಸ ಜಯಂತಿ ಹಾಗೂ ವೀರ ಮಹಿಳೆ ಒನಕೆ ಓಬವ್ವ ಜಯಂತಿಯನ್ನು ತಾಲೂಕಾ ಆಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
    ಬಿಡಕಿ ಬೈಲಿನಿಂದ ಆರಂಭಗೊಂಡ ಕನಕದಾಸರ ಹಾಗು ಒನಕೆ ಒಬ್ಬವ್ವ ಭಾವಚಿತ್ರವಿರುವ ಮೆರವಣಿಗಿಗೆ ಉಪ ತಹಶಿಲ್ದಾರ ರಮೇಶ ಹೆಗಡೆ ಚಾಲನೆ ನೀಡಿದರು.ಬಿಡಕಿಬೈಲಿನಿಂದ ಹೊರಟ ಮೆರವಣಿಗೆಯು ಮಿನಿವಿಧಾನ ಸೌಧದಲ್ಲಿ ಸಂಪನ್ನಗೊ0ಡಿತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪ ತಹಶಿಲ್ದಾರ ಶ್ರೀಧರ್ ಭಕ್ತ ಶ್ರೇಷ್ಠ ಕನಕದಾಸರು ತಮ್ಮ ದಾಸವಾಣಿಯ ಮೂಲಕ ಸಮಾಜದಲ್ಲಿ ಬೇರೂರಿದ್ದ ಅಸಮಾನತೆಯನ್ನು ಹೊರಹಾಕಲು ಪ್ರಯತ್ನಿಸಿದವರು. ಇವರು ಉಡುಪಿಯ ಶ್ರೀಕೃಷ್ಣನ ಅಪಾರವಾದ ಭಕ್ತರಾಗಿ ಶ್ರೀಕೃಷ್ಣನನ್ನೆ ಒಲಿಸಿಕೊಂಡವರು. ಇವರು ಕೀರ್ತನೆಯ ಮೂಲಕ ಜನರಿಗೆ ಭಕ್ತಿ ಮಾರ್ಗವನ್ನು ತೋರಿಸಿದ ಮಹಾದಾರ್ಶನಿಕರೆಂದು ಹೇಳಿದರು.
    ನಗರಸಭೆ ಉಪಾದ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ ಕನಕದಾಸರು ನಮಗೆ ಭಕ್ತಿ ಮಾರ್ಗ ಹೇಳಿಕೊಟ್ಟರೆ,ಒನಕೆ ಓಬವ್ವ ದೇಶಭಕ್ತಿಯನ್ನು ಹೇಳಿಕೊಟ್ಟವರೆಂದು ಹೇಳಿದರು.
    ಈ ಸಂದರ್ಭದಲ್ಲಿ ಪೌರಾಯುಕ್ತ ಕೇಶವ ಚೌಗುಲೆ, ತಾಪಂ ಕಾರ್ಯನಿರ್ವಹಣಾದಿಕಾರಿ ದೇವರಾಜ ಹಿತ್ತಲಮನಿ, ಚಲವಾದಿ ಮಹಾಸಭಾದ ಜಿಲ್ಲಾದ್ಯಕ್ಷ ಮಾದೇವ ಚಲವಾದಿ,ಕುರುಬ ಸಮಾಜದ ತಾಲೂಕಾ ಅದ್ಯಕ್ಷ ಡಿ.ಬಂಗಾರಪ್ಪ ಮುಂತಾದವರು ಉಪಸ್ಥಿತರಿದ್ದರು. ಪ್ರೊಪೆಸರ್ ರಾಘವೇಂದ್ರ ಎಲ್.ಒನಕೆ ಒಬ್ಬವ್ವ ವಿಷಯವಾಗಿ ಉಪನ್ಯಾಸ ನೀಡಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top