Slide
Slide
Slide
previous arrow
next arrow

ಕನಕದಾಸರ ಕೀರ್ತನೆಗಳಿಗೆ ಇಡೀ ಸಮಾಜವನ್ನು ಪರಿವರ್ತಿಸುವ ಶಕ್ತಿಯಿದೆ: ಸಂಜಯ್ ನಂದ್ಯಾಳ್ಕರ್

300x250 AD

ದಾಂಡೇಲಿ: ನಗರದ ನಗರ ಸಭೆಯ ಸಭಾಭವನದಲ್ಲಿ ನಗರಾಡಳಿತದ ವತಿಯಿಂದ ದಾಸಶ್ರೇಷ್ಟರಾದ ಕನಕದಾಸರ ಮತ್ತು ಒನಕೆ ಓಬವ್ವರವರ ಜನ್ಮ ಜಯಂತಿ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.
ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಮತ್ತು ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್ ಅವರು ಮಾತನಾಡಿ ಕನಕದಾಸರ ದಾಸರ ಪದಗಳು, ಕೀರ್ತನೆಗಳಿಗೆ ಇಡೀ ಸಮಾಜವನ್ನು ಪರಿವರ್ತಿಸುವ ಮಹತ್ವದ ಶಕ್ತಿಯಿದೆ. ಸಮಾನತೆ ಮತ್ತು ಭ್ರಾತೃತ್ವದ ಸಂದೇಶವನ್ನು ಸಾರುವ ಮೂಲಕ ಕನಕದಾಸರ ಕೀರ್ತನೆಗಳು ಸದಾ ಸ್ಮರಣೀಯ ಎನಿಸಿಕೊಂಡಿವೆ ಎಂದರಲ್ಲದೇ, ಒನಕೆ ಓಬವ್ವರವರು ತಮ್ಮ ಸಾಹಸತನ, ಸ್ತ್ರೀ ಶಕ್ತಿಯನ್ನು ವಿಶ್ವಕ್ಕೆ ಸಾರುವುದರ ಮೂಲಕ ಕರುನಾಡಿನ ದಿಟ್ಟ ಮಹಿಳೆ ಎನಿಸಿಕೊಂಡಿದ್ದಾರೆ ಎಂದರು.
ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಮಾತನಾಡಿ ಮಹನೀಯರ, ದಾರ್ಶನಿಕರ ಜನ್ಮ ಜಯಂತಿ ಆಚರಿಸುವುದರ ಜೊತೆಗೆ ಅವರ ತ್ವತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಉಪನ್ಯಾಸಕರಾಗಿ ಕನ್ಯಾ ಪಿಯು ಕಾಲೇಜಿನ ಪ್ರಾಚಾರ್ಯರಾದ ಹನುಮಂತ ಕುಂಬಾರ ಅವರು ಭಾಗವಹಿಸಿ ಕನಕದಾಸರ ಮತ್ತು ಒನಕೆ ಓಬವ್ವ ಅವರ ಜೀವನ ವ್ಯಕ್ತಿತ್ವ ಹಾಗೂ ಸಮಾಜಕ್ಕೆ ಅವರ ಕೊಡುಗೆ ಮತ್ತು ದಿವ್ಯ ಸಂದೇಶಗಳನ್ನು ವಿವರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರಾದ ಯಾಸ್ಮಿನ್ ಕಿತ್ತೂರು, ಮಜೀದ್ ಸನದಿ, ದಶರಥ ಬಂಡಿವಡ್ಡರ, ವಿಜಯ್ ಕೊಲೇಕಾರ, ಮಹಾದೇವ ಜಮಾದಾರ, ಮಹಾದೇವಿ ಭದ್ರಶೆಟ್ಟಿ, ರುಕ್ಮಿಣಿ ಬಾಗಾಡೆ, ರಮಾ ರವೀಂದ್ರ, ಸುಧಾ ರಾಮಲಿಂಗ ಜಾಧವ್, ನಗರ ಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top