Slide
Slide
Slide
previous arrow
next arrow

ಜಾತಿ ಸಂಘರ್ಷ ದೂರವಾಗಬೇಕು: ಸುರೇಶ ನಾಯ್ಕ

300x250 AD

ಹೊನ್ನಾವರ: ಹಿಂದಿನ ಕಾಲದಲ್ಲಿ ಇದ್ದ ಜಾತಿ ಸಂಘರ್ಷ ಇಂದಿಗೂ ನಾವು ಕಾಣುತ್ತಿದ್ದು, ಇದು ಅಂತ್ಯವಾಗಬೇಕು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುರೇಶ ನಾಯ್ಕ ಹೇಳಿದರು.
ಪಟ್ಟಣದ ಆಡಳಿತಸೌಧದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಮತ್ತು ವೀರರಾಣಿ ಒನಕೆ ಒಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆದರ್ಶಪುರುಷರ ಜಯಂತಿ ಕಾರ್ಯಕ್ರಮ ಆಯೋಜನೆಯಿಂದ ಜಾತಿ ಸಂಘರ್ಷ ದೂರವಾಗಿಸಲು ಪ್ರೇರಣೆಯಾಗಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಹಶೀಲ್ದಾರ ನಾಗರಾಜ ನಾಯ್ಕಡ ಮಾತನಾಡಿ ಕನಕದಾಸರಿಗೆ ಸಿಕ್ಕ ಬಂಗಾರಕ್ಕೆ ಆಸೆಪಟ್ಟು ದಾಸರಾಗದೇ, ಬಂಗಾರವನ್ನು ದಾನಮಾಡಿ ದಾಸರಾದವರು. ಸಮಾಜದ ಏರು ಪೇರುಗಳನ್ನು, ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಕನಕದಾಸ ಹಾಗೂ ಓನಕೆ ಓಬವ್ವ ಮಹಾನ್ ವ್ಯಕ್ತಿಗಳಾದರು. ಇವರ ಆದರ್ಶವನ್ನು ನಾವು ಪಾಲಿಸೋಣ ಎಂದರು.
ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಶೀಲ್ದಾರ ಉಷಾ ಪಾವಸ್ಕರ್, ಬಿ.ಇ.ಓ ಜಿ.ಎಸ್.ನಾಯ್ಕ ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top