• Slide
  Slide
  Slide
  previous arrow
  next arrow
 • ಕನಕದಾಸರು ಯಾವುದೇ ಒಂದು ಜಾತಿಗೆ ಸೀಮಿತವಾದವರಲ್ಲ: ಸಚಿವ ಹೆಬ್ಬಾರ್

  300x250 AD

  ಯಲ್ಲಾಪುರ: ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪಟ್ಟಣ ಪಂಚಾಯತ ಹಾಗೂ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕನಕದಾಸರು ಹಾಗೂ ವೀರರಾಣಿ ಒನಕೆ ಓಬವ್ವ ಜಯಂತಿ ಹಿನ್ನಲೆಯಲ್ಲಿ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಕನಕದಾಸರು ಹಾಗೂ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು

  ನಂತರ ಮಾತನಾಡಿ, ಕನಕದಾಸರು ಎಲ್ಲಾ ಜಾತಿ ಪಂಥದವರಿಗೆ ಸೇರಿದವರು. ಯಾವುದೇ ಒಂದು ಜಾತಿ ಪಂಥಕ್ಕೆ ಸೀಮಿತವಾದವರಲ್ಲ, ಆದರೇ, ಅವರ ಸಮುದಾಯದವರಿಗೆ ಕನಕದಾಸರು ಸಾಧನೆಗಳು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಸಮಾಜಕ್ಕೆ ಮಾರ್ಗದರ್ಶನ ಮಾಡಿರುವ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಓದಿ ಅರಿತುಕೊಳ್ಳುವುದರ ಮೂಲಕ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುನಂದಾ ದಾಸ್, ಕನಕದಾಸರು ತತ್ವಜ್ಞಾನಿ, ಕವಿ, ಸಂಗೀತಗಾರರು, ಕೀರ್ತನೆಗಳ ಮೂಲಕ ಸಮಾಜಕ್ಕೆ ದಾರಿದೀಪವಾಗಿದ್ದಾರೆ. ದೇವರಿಗೆ ಇಲ್ಲದ ಜಾತಿ ಪದ್ದತಿ ನಮಗ್ಯಾಕೆ ಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
  ಕಾರ್ಯಕ್ರಮದಲ್ಲಿ ಬಾಲಕ ಪ್ರಜ್ವಲ್ ಕನಕದಾಸರ ಕುರಿತು ಮಾತನಾಡಿದನು. ಸನತ್ ಕುಮಾರ್ ಹೆಗಡೆ ಅವರಿಂದ ಕನಕದಾಸರ ಕೀರ್ತನೆಗಳ ಕೊಳಲುವಾದನ ನಡೆಯಿತು. ಅವರಿಗೆ ನಾಗರಾಜ ವೈದ್ಯ ತಬಲಾ ಸಾಥ್ ನೀಡಿದರು. ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಕನಕದಾಸರ ಕೀರ್ತನೆ ಕುರಿತು ಸ್ಪರ್ಧೆ ಏರ್ಪಡಿಸಲಾಗಿತ್ತು, ವಿಜೇತರಾದವರಿಗೆ ಸಚಿವರು ಬಹುಮಾನ ವಿತರಿಸಿದರು.
  ವಿಶ್ವದರ್ಶನ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ದತ್ತಾತ್ರೇಯ ಗಾಂವ್ಕರ ಉಪನ್ಯಾಸ ನೀಡಿ, ಅನ್ನದ ಋಣ, ಆಳುವ ದೊರೆಯ ಮೇಲಿನ ಪ್ರೇಮ, ಮಾಡುವ ಕರ್ತವ್ಯ ಮೇಲಿರುವ ನಿಷ್ಠೆ ವೀರ ಒನಕೆ ಒಬ್ಬವನಲ್ಲಿ ಹೈದರಾಲಿ ಸೈನ್ಯವನ್ನು ಎದುರಿಸಲು ಶಕ್ತಿ ನೀಡಿತು. ವನಿತೆಯಿಂದ ವೀರ ಮಹಿಳೆಯಾಗಿ ಅವಳು ಪರಿವರ್ತನೆಗೊಂಡಳು. ಹಾಗೆಯೇ ಕುರಿಗಾಹಿಯಾಗಿದ್ದ ತಿಮ್ಮಪ್ಪನಾಯಕ ಭಕ್ತಿಪಂಥವನ್ನು ಒಪ್ಪಿಕೊಂಡು ಕನಕದಾಸರಾಗಿ ವೀರನಾದವನು ದಾಸರಾದರು ಎಂದು ಹೇಳಿದರು.
  ವೈಟಿಎಸ್‌ಎಸ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ವೈ ಎಸ್ ಗೋಕುಲ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕುಮ್ಮಾರ ವೇದಿಕೆಯಲ್ಲಿದ್ದರು. ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಸ್ವಾಗತಿಸಿದರು. ತಹಸೀಲ್ದಾರ್ ಕಚೇರಿ ಸಿಬ್ಬಂದಿ ಶ್ರೀಧರ ಮಡಿವಾಳ ನಿರೂಪಿಸಿ, ವಂದಿಸಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top