ಮುಂಡಗೋಡ: ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಕ್ಕಮಹಾದೇವಿ ಆರ್.ಗಾಣಿಗೇರ ಪ್ರಭಾರ ಅಧಿಕಾರ ಸ್ವೀಕರಿಕೊಂಡಿದ್ದಾರೆ.
ಇವರು ಹುನಗುಂದ ಸರಕಾರಿ ಪ್ರೌಢಶಾಲೆ ಮುಖ್ಯೋಧ್ಯಾಪಕಿಯಾಗಿ 9 ವರ್ಷ ಕಾರ್ಯನಿರ್ವಾಹಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಅಕ್ಕಮಹಾದೇವಿ ಅವರಿಗೆ ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಬರಮಾಡಿಕೊಂಡು ಸನ್ಮಾನಿಸಿದರು.
ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಿ.ಎಸ್.ಪಟಗಾರ ಅವರು ಗುಲ್ಬರ್ಗಾ ಆಯುಕ್ತರ ಕಛೇರಿಗೆ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಿ ವರ್ಗಾವಣೆಯಾಗಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಕ್ಕಮಹಾದೇವಿ ಅಧಿಕಾರಕ್ಕೆ
