Slide
Slide
Slide
previous arrow
next arrow

ದೇಶದ ಅಭಿವೃದ್ಧಿಯಲ್ಲಿ ಪರಿಸರದ ಸಂರಕ್ಷಣೆ ಮುಖ್ಯ: ವಸಂತ ರೆಡ್ಡಿ

300x250 AD

ಶಿರಸಿ: ದೇಶದ ಅಭಿವೃದ್ಧಿಯಲ್ಲಿ ಪರಿಸರದ ಸಂರಕ್ಷಣೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಿಸಿಎಫ್ ಕೆ.ವಿ.ವಸಂತ ರೆಡ್ಡಿ ಹೇಳಿದರು.
ಇಲ್ಲಿನ ರಾಘವೇಂದ್ರ ಮಠದ ಸಭಾಂಗಣದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ಆಯೋಜಿಸಿರುವ ಪರಿಸರ ಕಾರ್ಯಕರ್ತರ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು.
ಅರಣ್ಯ ಜಾಗೃತಿ ವಿಸ್ತರಿಸುವ ಅಗತ್ಯವಿದೆ. ನಿರಂತರವಾಗಿ ಜನರಿಗೆ ಪರಿಸರ ಸಂರಕ್ಷಣೆಯ ಕುರಿತು ಮನದಟ್ಟು ಮಾಡಿಕೊಟ್ಟರೆ ಸಂರಕ್ಷಣೆಗೆ ನೆರವಾಗುತ್ತದೆ ಎಂದರು. ಬದಲಾದ ಕಾಲ ಘಟ್ಟದಲ್ಲಿ ಕಾಡು, ನೈಸರ್ಗಿಕ ಸಂಪತ್ತು ನಾಶ ಮಾಡಲಾಗುತ್ತಿದೆ. ಇದು ಭವಿಷ್ಯದಲ್ಲಿ ಅಪಾಯ ಎದುರಿಸಲು ಕಾರಣವಾಗಬಹುದು. ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತುಳಸಿ ಗೌಡ, ಗಿಡಗಳನ್ನು ಬೆಳೆಸುವ ಮೂಲಕ ಪರಿಸರದ ಉಳಿವಿಗೆ ಕೊಡುಗೆ ನೀಡಿ ಎಂದರು.
ಸಿದ್ದಾಪುರದ ಧನ್ವಂತರಿ ಆಯುರ್ವೇದ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಕಾರ್ಯಾಧ್ಯಕ್ಷ ಶಶಿಭೂಷಣ ಹೆಗಡೆ, ಪರಿಸರದ ಉಳಿವಿಗೆ ತರಬೇತಿ ಮತ್ತು ಜಾಗೃತಿ ಅಗತ್ಯವಿದೆ. ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ಪರಿಸರದ ಉಳಿವಿನ ಕಾರ್ಯಕ್ರಮಗಳ ರೂಪಿತಗೊಳ್ಳಬೇಕು ಎಂದರು.
ಅರಣ್ಯ ಕಾಲೇಜಿನ ಡೀನ್ ಆರ್.ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ಯೂತ್ ಫಾರ್ ಸೇವಾ ಸಂಸ್ಥೆಯ ಸಂಚಾಲಕ ಉಮಾಪತಿ ಭಟ್, ಭಾರತೀಯ ಸಂಸ್ಕೃತಿ ಆಧಾರದಲ್ಲಿ ಪರಿಸರ ಸಂರಕ್ಷಣೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಯುವಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಯೂತ್ ಫಾರ್ ಸೇವಾ ಸಂಸ್ಥೆಯ ಕಾರ್ಪೊರೇಟ್ ರಿಲೇಶನ್ಸ್ ವಿಭಾಗದ ಮುಖ್ಯಸ್ಥ ಭಾಸ್ಕರ ಕೇಶವಮೂರ್ತಿ, ಶ್ರೀಧರ ಇಸಳೂರು ಇದ್ದರು. ಸತೀಶ ಹೆಗಡೆ ಸ್ವಾಗತಿಸಿದರು.

300x250 AD
Share This
300x250 AD
300x250 AD
300x250 AD
Back to top