ಕುಮಟಾ: ತಾಂಡವ ಕಲಾನಿಕೇತನ ಹಾಗೂ ವೈಭವ ಸಮಿತಿಯಿಂದ ಆಶ್ರಯಮತ್ತು ಟೀಮ್ ವಾರಿಯರ್ಸ್ ಅಸೋಸಿಯೇಶನ್ ಮತ್ತು ಹಾಲಕ್ಕಿ ಸಮಾಜದ ಸಹಕಾರದಲ್ಲಿ ‘ಕುಮಟಾ ವೈಭವ 2022’ ನಿಮಿತ್ತ ಪಟ್ಟಣದ ಮಣಕಿ ಮೈದಾನದ ಲಿಂಗಪ್ಪ ಮಾಸ್ತರ ವೇದಿಕೆಯಲ್ಲಿ ನ.11ರಂದು ಹಾಲಕ್ಕಿ ಚುಂಚಾದ್ರಿ ವಾಲಿಬಾಲ್ ಪಂದ್ಯಾವಳಿ ಮತ್ತು ನ.12 ರಿಂದ ನ.16ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ತಾಂಡವ ಕಲಾ ನಿಕೇತನ ಅಧ್ಯಕ್ಷ ಮಂಜುನಾಥ ನಾಯ್ಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಾಲಕ್ಕಿ ಸಮುದಾಯದಿಂದ ನ.11 ರಂದು ಮಧ್ಯಾಹ್ನ 3 ಘಂಟೆಯಿಂದ ಹಾಲಕ್ಕಿ ಚುಂಚಾದ್ರಿ ವಾಲಿಬಾಲ ಪಂದ್ಯಾವಳಿ ನಡೆಯಲಿದೆ. ನ. 12 ರಂದು 8 ಘಂಟೆಗೆ ಕುಮಟಾ ವೈಭವದ ವೇದಿಕೆಯ ಕಾರ್ಯಕ್ರಮ ನಡೆಯಲಿದೆ. ನ.12 ರಂದು ಪತ್ರಕರ್ತ ಅನ್ಸಾರ ಶೇಖ್ ಅವರನ್ನು ಸನ್ಮಾನಿಸಲಾಗುವುದು. ಗುಮ್ಮಟೆ ಪಾಂಗ್, ಅಘನಾಶಿನಿಯ ಹಾಲಕ್ಕಿ ಸಮಾಜದವರಿಂದ ಸುಗ್ಗಿ ಕುಣಿತ, ಆಲ್ ಓಕೆ ಕನ್ನಡ Rapper ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನ. 13 ರಂದು ಕುಮಟಾದ ವೈದ್ಯರಿಗೆ ಮತ್ತು ಸಾಮಾಜಿಕ ಕಾರ್ಯಕರ್ತ ಮಾರುತಿ ಗೌಡ ಅವರಿಗೆ ಸನ್ಮಾನ, ಅಘನಾಶಿನಿಯ ಚಿಣ್ಣರ ಸುಗ್ಗಿ ಮೇಳ, ಸ್ಥಳೀಯ ಕಲಾವಿದರಿಂದ ಭರತನಾಟ್ಯ, ಯಕ್ಷನೃತ್ಯ, ಬಾಲಿವುಡ್ ಬ್ಯಾಂಡ್ ಲಕ್ಷ್ಮಣ ನಾಯ್ಕ ಮತ್ತು ರೋಕ್ ಬ್ಯಾಂಡ್ ಸಾಂಸ್ಕೃತಿಕ ಕಾರ್ಯಕ್ರಮ, ನ.14 ರಂದು ಮದ್ದಲೆವಾದಕ ರಮೇಶ ಭಂಡಾರಿ ಅವರಿಗೆ ಸನ್ಮಾನ, ಭರತನಾಟ್ಯ, ಸುಗಮಸಂಗೀತ, ಕಾಮಿಡಿ ಕಿಲಾಡಿ ಕಲಾವಿದರ ತಂಡ ಮತ್ತು ಮಜಾಭಾರತ ಕಲಾವಿದರಿಂದ ಹಾಸ್ಯ ನಡೆಯಲಿದೆ ಎಂದು ತಿಳಿಸಿದರು.
ನ.15 ರಂದು ಚಿತ್ರಕಲಾವಿದ ಮನೋಜ ಗುನಗಾ ಅವರಿಗೆ ಸನ್ಮಾನ, ಸ್ಥಳೀಯ ಕಲಾವಿದರಿಂದ ಮತ್ತು ಕನ್ನಡ ಕೋಗಿಲೆ ತಂಡದ ಸಂದೇಶ ನೀರಮಾರ್ಗ, ವಿದ್ಯಾ ರಾಮಚಂದ್ರ ಮತ್ತು ಇತರೆ ಕಲಾವಿದರಿಂದ ಸಂಗೀತ ಸಂಜೆ, ನ.16 ರಂದು ಚಿತ್ರ ಕಲಾವಿದ ಮಹೇಶ ಗುನಗಾ ಅವರಿಗೆ ಸನ್ಮಾನ, ಗೋವಾ ನೃತ್ಯ ಕಲಾವಿದರಿಂದ ಬೆಲ್ಲಿ ಡ್ಯಾನ್ಸ್, ಇಂಡಿಯಲ್ ಐಡಲ್ ಟೀಮ್‌ನಿಂದ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ 7 ಘಂಟೆಯಿಂದ 8 ರವರೆಗೆ ಸ್ಥಳೀಯ ಕಲಾವಿದರಿಗೆ ವೇದಿಕೆ ನೀಡಲಾಗುತ್ತದೆ. ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಕರಾವಳಿಯ ವೈಶಿಷ್ಟ್ಯ ಸಾರುವ 150 ಕ್ಕೂ ವಿವಿಧ ಮಳಿಗೆ ಇರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುಮಟಾ ವೈಭವ ಸಮಿತಿಯ ಅಧ್ಯಕ್ಷ ನಾಗೇಶ ನಾಯಕ ಕಲಭಾಗ, ಸಂಚಾಲಕ ನಿರಂಜನ ನಾಯ್ಕ, ಪ್ರಮುಖರಾದ ಗಣೇಶ ನಾಯ್ಕ, ನರಸಿಂಹ ಭಟ್ಟ ಕಡತೋಕಾ, ರವಿ ಗಾವಡಿ, ಟೀಮ್ ವಾರಿಯರ್ಸ್ನ ಪವನ ಗುಗನಾ, ಯೋಗೀಶ ನಾಯ್ಕ, ಅಭಿನವ, ಕಿಶನ, ಸಾಯಿಪ್ರಸಾದ, ರಜತ, ಕಿರಣ ಸೇರಿದಂತೆ ಮತ್ತಿತರರು ಇದ್ದರು.
ಕಾರ್ಯಕ್ರಮ ವೇಳಾಪಟ್ಟಿ
ನ. 12 ರಂದು ಸಂಜೆ 8 ಘಂಟೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡ ಉದ್ಘಾಟಿಸಲಿದ್ದು, ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಪುರಸಭಾ ಅಧ್ಯಕ್ಷೆ ಅನುರಾಧಾ ಬಾಳೇರಿ, ಪುರಸಭಾ ಸದಸ್ಯೆ ಲಕ್ಷ್ಮಿ ಗೊಂಡ, ಕುಮಟಾ ಅರ್ಬನ ಬ್ಯಾಂಕ್ ಅಧ್ಯಕ್ಷ ಧೀರೂ ಶಾನಭಾಗ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಪುರಸಭಾ ಸದಸ್ಯ ಸಂತೋಷ ನಾಯ್ಕ, ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಪುರಸಭಾ ಉಪಾಧ್ಯಕ್ಷೆ ಸುಮತಿ ಭಟ್ಟ, ಬಿಜೆಪಿ ಮುಖಂಡ ಎಂ.ಜಿ.ಭಟ್ಟ, ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ, ಪುರಸಭಾ ಸದಸ್ಯೆ ಗೀತಾ ಮುಕ್ರಿ, ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ ಪಾಲ್ಗೊಳ್ಳಲಿದ್ದಾರೆ.
ನ.13 ರಂದು ಸಂಜೆ 8 ಘಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಹಿಸಲಿದ್ದು, ಭಟ್ಕಳ ಶಾಸಕ ಸುನೀಲ ನಾಯ್ಕ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಮಂಜುನಾಥ ಜನ್ನು, ಸೇಫ್ ಸ್ಟಾರ್ ಸೌಹಾರ್ದ ಅಧ್ಯಕ್ಷ ಜಿ.ಜಿ.ಶಂಕರ, ಕೆ.ಸಿ.ಸಿ.ಸಿ ಸದಸ್ಯ ಎಂ.ಎನ್.ಸುಬ್ರಹ್ಮಣ್ಯ, ನಾಗರಾಜ ನಾಯಕ ತೊರ್ಕೆ, ಲೇನಸ್ ಹಾಸ್ಟೇಲ್‌ನ ಡಾ.ಸತೀಶ.ಟಿ.ಎಂ., ಪುರಸಭಾ ಸದಸ್ಯರಾದ ರಾಜೇಶ ಪೈ, ಮೋಹಿನಿ ಗೌಡ, ಟೋನಿ ರೊಡ್ರಗಿಸ್, ತುಳುಸು ಗೌಡ, ವಿನಯಾ ಜಾರ್ಜ್, ವೈದ್ಯ ಡಾ.ಜಿ.ಜಿ.ಹೆಗಡೆ, ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಮಾಧವ ನಾಯಕ ಕಾರವಾರ, ಉದ್ಯಮಿ ಆನಂದು ಕವರಿ, ದಂತ ವೈದ್ಯ ಡಾ.ಸುರೇಶ ಹೆಗಡೆ, ನ.14 ರಂದು 8 ಘಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಉದ್ಘಾಟಿಸಲಿದ್ದು, ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿ.ಪಂ ಮಾಜಿ ಸದಸ್ಯ ಹೊನ್ನಪ್ಪ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ, ಪ್ರಮೋದ ಹೆಗಡೆ ಯಲ್ಲಾಪುರ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಂ.ಕೆ.ನಾಯಕ, ತಾಲೂಕಾ ಅಧ್ಯಕ್ಷ ರಾಜೇಶ ಭಂಡಾರಿ, ಉದ್ಯಮಿ ಈಶ್ವರ ನಾಯ್ಕ, ಜಿ.ಪಂ ಮಾಜಿ ಸದಸ್ಯ ರತ್ನಾಕರ ನಾಯ್ಕ, ಪುರಸಭಾ ಸದಸ್ಯರಾದ ಸೂರ್ಯಕಾಂತ ಗೌಡ, ಅಭಿ ನಾಯ್ಕ, ಕಿರಣ ಅಂಬಿಗ, ಡಿ.ಎಫ್.ಓ ರವಿಶಂಕರ.ಸಿ, ಜಿ.ಪಂ ಮಾಜಿ ಸದಸ್ಯ ಪ್ರದೀಪ ನಾಯಕ, ಡಿ.ಡಿ.ಪಿ.ಐ ಈಶ್ವರ ನಾಯ್ಕ, ವಕೀಲ ಶ್ರೀಕಾಂತ ನಾಯ್ಕ, ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಿರ್ದೇಶಕ ಚಂದ್ರು ಬಸ್ರೂರ, ಸಂಗೀತ ನಿರ್ದೇಶಕ ಉತ್ತಮ ಸಾರಂಗ, ಚಲನಚಿತ್ರ ನಿರ್ಮಾಪಕ ಗುರು ಬಸ್ರೂರ ಭಾಗವಹಿಸುವವರು.
ನ.15 ರಂದು ಸಂಜೆ 8 ಘಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಡಿ.ಎಸ್.ಪಿ ವ್ಯಾಲೆಂಟೈನ್ ಡಿಸೋಜಾ ಅಧ್ಯಕ್ಷತೆ ವಹಿಸುವವರು. ಅತಿಥಿಗಳಾಗಿ ಉದ್ಯಮಿ ಮದನ ನಾಯಕ, ಜಿ.ಪಂ ಮಾಜಿ ಸದಸ್ಯೆ ಗಾಯತ್ರಿ ಗೌಡ, ವಕೀಲ ಎಂ.ಎನ್.ಸುಬ್ರಹ್ಮಣ್ಯ, ಸುವರ್ಣಕಾರರ ಬ್ಯಾಂಕ್ ಅಧ್ಯಕ್ಷ ಮಧುಸೂದನ ಶೇಟ್, ಪುರಸಭಾ ಸದಸ್ಯರಾದ ಮಂಜುನಾಥ ನಾಯ್ಕ, ಮಹೇಶ ನಾಯ್ಕ, ಛಾಯಾ ವೆಂಗುರ್ಲೇಕರ, ಇಸ್ಸಾಕ ಶಮಾಲಿ, ಪಲ್ಲವಿ ಮಡಿವಾಳ, ಆಶಾ ನಾಯ್ಕ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಭುವನ ಭಾಗ್ವತ, ಹೊನ್ನಾವರ ಪ.ಪಂ ಮಾಜಿ ಅಧ್ಯಕ್ಷ ಶಿವರಾಜ ಮೇಸ್ತ, ನ.16 ರಂದು ರಾತ್ರಿ 8 ಘಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಉದ್ಯಮಿ ಸುಬ್ರಾಯ ವಾಳ್ಕೆ, ವಕೀಲ ಆರ್.ಜಿ.ನಾಯ್ಕ, ಜೆ.ಡಿ.ಎಸ್ ಮುಖಂಡ ಸೂರಜ ನಾಯ್ಕ ಸೋನಿ, ನಿವೃತ್ತ ಎಸ್.ಪಿ ಎನ್.ಟಿ.ಪ್ರಮೋದ ರಾವ್, ಸಿ.ಪಿಐ ತಿಮ್ಮಪ್ಪ ನಾಯ್ಕ, ಪುರಸಭಾ ಸದಸ್ಯರಾದ ಅನಿಲ ಹರ್ಮಲಕರ, ಶೈಲಾ ಗೌಡ ಲಕ್ಷ್ಮಿ ಚಂದಾವರ, ಕ.ಸಾಪ ಮಾಜಿ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ, ಪಿ.ಎಸ್.ಐ ನವೀನ ನಾಯ್ಕ, ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ, ವರದ ಇಂಟರ್‌ನ್ಯಾಶನಲ್ ಮಾಲಿಕ ಜಗದೀಶ ಡಿ ನಾಯಕ, ಪುರಸಭಾ ಮಾಜಿ ಸದಸ್ಯ ಲಿಂಗಪ್ಪ ನಾಯ್ಕ, ನಿವೃತ್ತ ಪೊಲೀಸ್ ಅಧಿಕಾರಿ ಮಂಜುನಾಥ ನಾಯ್ಕ ಪಾಲ್ಗೊಳ್ಳಲಿದ್ದಾರೆ.