ದಾಂಡೇಲಿ: ಧಾರವಾಡದಿಂದ ವಯಾ ಹಳಿಯಾಳ-ದಾಂಡೇಲಿಗೆ ಸಮಯಕ್ಕೆ ಸರಿಯಾಗಿ ಬಸ್ಸು ಬಿಡದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ವಿದ್ಯಾರ್ಥಿಗಳಿಗಂತೂ ಸಮಯಕ್ಕೆ ಸರಿಯಾಗಿ ಬಸ್ ಬರದೇ ಇರುವುದರಿಂದ ಶಾಲೆ, ಕಾಲೇಜುಗಳಿಗೆ ಹೋಗಲು ಕಷ್ಟಸಾಧ್ಯವಾಗುತ್ತಿದೆ. ಕಳೆದ ಹಲವು ತಿಂಗಳುಗಳಿಂದ ಈ ಸಮಸ್ಯೆ ಉಂಟಾಗಿದ್ದು, ಈ ಕೂಡಲೆ ದಾಂಡೇಲಿ ಮತ್ತು ಧಾರವಾಡ ಸಾರಿಗೆ ಘಟಕದವರು ನಿಗದಿತ ಸಮಯಕ್ಕೆ ಬಸ್ಸುಗಳನ್ನು ಬಿಡುವಂತೆ ದಾಂಡೇಲಿ ನಗರದಲ್ಲಿ ವಿದ್ಯಾರ್ಥಿಗಳು ಮತ್ತು ಇತರೇ ಪ್ರಯಾಣಿಕರು ಸಾರಿಗೆ ಘಟಕವನ್ನು ಆಗ್ರಹಿಸಿದ್ದಾರೆ.
ನಿಗದಿತ ಸಮಯಕ್ಕೆ ಬಸ್ ಬಿಡುವಂತೆ ಆಗ್ರಹ
