• first
  second
  third
  Slide
  Slide
  previous arrow
  next arrow
 • ನಿವೃತ್ತ ಶಿಕ್ಷಕ ಶಂಕರ ಕರಾಡೇಕರ್ ನಿಧನ

  300x250 AD

  ಯಲ್ಲಾಪುರ: ನಿವೃತ್ತ ಶಿಕ್ಷಕ ಶಂಕರ ಶಾಂಬ ಕರಾಡೇಕರ್ ಅನಾರೋಗ್ಯದ ಕಾರಣಕ್ಕಾಗಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.
  ತಾಲೂಕಿನ ತಾರೇಹಳ್ಳಿ ಪ್ರಾಥಮಿಕ ಶಾಲೆಗೆ 1977ರಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿದ ಶಂಕರ ಕರಾಡೇಕರ, ಯಲ್ಲಾಪುರ ತಾಲೂಕಿನ ಕೊಡಸೆ, ಘರವಾಸ, ಮುಂಡವಾಡ, ಸವಣಗೇರಿ, ಮಳಲಗಾಂವ್, ಶಿಕ್ಷಕರಾಗಿ ಸೇವೆ ಸಲ್ಲಿಸಿದ್ಸರು. ನಂದೊಳ್ಳಿ ಪ್ರಾಥಮಿಕ ಶಾಲೆ ನಂತರ ಪ್ರೌಢಶಾಲಾ ಶಿಕ್ಷಕರಾಗಿ ಪದೋನ್ನತಿ ಹೊಂದಿ ಗುಂಡೋಳ್ಳಿ ಹಾಗೂ ಹಳಿಯಾಳ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು. ಮೇ 31, 2019ರಂದು ಸೇವಾ ನಿವೃತ್ತಿ ಹೊಂದಿದ್ದರು.

  ಇತ್ತೀಚಿನ ಕೆಲ ದಿನಗಳಿಂದ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಶಂಕರ ಕರಾಡೇಕರ, ಅವರನ್ನು ಶಸ್ತ್ರ ಚಿಕಿತ್ಸೆ ಮೂಲಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾಗಿದ್ದಾರೆ.
  ಮೃತರು ಶಿಕ್ಷಕ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ನಾಲ್ವರು ಸಹೋದರರು, ಐವರು ಸಹೋದರಿಯರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಶಂಕರ ಕರಾಡೇಕರ ನಿಧನಕ್ಕೆ ಶಿಕ್ಷಕರಾದ ಚಂದ್ರಹಾಸ ನಾಯ್ಕ, ಮಾರುತಿ ನಾಯ್ಕ, ಗಂಗಾಧರ ಪಟಗಾರ, ಗಣಪತಿ ಪಟಗಾರ, ಹೇಮಂತ್ ದುರಂದರ್, ಸತ್ಯಭಾಮಾ ನಾಯ್ಕ, ವಿ.ಪಿ.ನಾಯ್ಕ, ಹಿರಿಯ ಕ್ರೀಡಾಪಟು ಅಶೋಕ ನಾಯ್ಕ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.
  ***

  300x250 AD
  Share This
  300x250 AD
  300x250 AD
  300x250 AD
  Back to top