Slide
Slide
Slide
previous arrow
next arrow

ನ. 23ಕ್ಕೆ ಸ್ಪೀಕರ್ ಕಾಗೇರಿಗೆ ನಾಗರಿಕ ಸನ್ಮಾನ

300x250 AD

ಹೊನ್ನಾವರ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ನ.23ರಂದು ಪಟ್ಟಣದ ಮೂಡಗಣಪತಿ ದೇವಸ್ಥಾನದ ಸಭಾಭವನದಲ್ಲಿ ನಾಗರಿಕ ಸನ್ಮಾನ ಏರ್ಪಡಿಸಲಾಗಿದೆ ಎಂದು ಸನ್ಮಾನ ಸಮಿತಿಯ ಅಧ್ಯಕ್ಷ ವೆಂಕಟರಮಣ ಹೆಗಡೆ ಕವಲಕ್ಕಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಜಿಲ್ಲೆಯ ಶಾಸಕರುಗಳಾದ ಆರ್.ವಿ.ದೇಶಪಾಂಡೆ, ದಿನಕರ ಶೆಟ್ಟಿ, ಸುನೀಲ ನಾಯ್ಕ, ನಿಗಮ ಮಂಡಳಿಯ ಅಧ್ಯಕ್ಷ ಗೋವಿಂದ ನಾಯ್ಕ, ಪ್ರಮೋದ ಹೆಗಡೆ ಯಲ್ಲಾಪುರ ಮುಂತಾದವರು ಭಾಗವಹಿಸುವರು. ಹೊರನಾಡು ಕ್ಷೇತ್ರದ ಧರ್ಮಾಧಿಕಾರಿ ಭೀಮೇಶ್ವರ ಜೋಶಿ ಸನ್ಮಾನ ನೆರವೇರಿಸುವರು ಎಂದು ತಿಳಿಸಿದರು.
ಬಿಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷ ರಾಜೇಶ ಭಂಡಾರಿ ಮಾತನಾಡಿ, ಪಕ್ಷಾತೀತವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದು, ಪಂಚಾಯತಿ ಸದಸ್ಯರನ್ನೂ ಸೇರಿಸಿಕೊಂಡು ಸನ್ಮಾನ ಸಮಿತಿ ರಚಿಸಲಾಗಿದೆ. ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸನ್ಮಾನ ಕಾರ್ಯಕ್ರಮವನ್ನು ಈ ಹಿಂದೆಯೇ ಯೋಜಿಸಲಾಗಿತ್ತು. ಆದರೆ ಕೋವಿಡ್ ಮತ್ತಿತರ ಕಾರಣಗಳಿಂದ ಆಯೋಜಿಸಲಾಗಿರಲಿಲ್ಲ ಎಂದು ತಿಳಿಸಿದರು.
ಈ ವೇಳೆ ಸನ್ಮಾನ ಸಮಿತಿಯ ಗೌರವಾಧ್ಯಕ್ಷ ಉಮೇಶ ನಾಯ್ಕ, ಕಾರ್ಯದರ್ಶಿ ಎಂ.ಎಸ್.ಹೆಗಡೆ ಕಣ್ಣಿ, ಸಂಚಾಲಕ ಗಣೇಶ ಪೈ, ಶ್ರೀಕಾಂತ ಮೊಗೇರ, ರಘು ಪೈ, ಅರ್ಜುನ ರಾಯ್ಕರ, ಪ.ಪಂ. ಸದಸ್ಯ ವಿಜು ಕಾಮತ, ವಿಶ್ವನಾಥ ಗೊಂಡ ಉಪಸ್ಥಿತರಿದ್ದರು.
**

300x250 AD
Share This
300x250 AD
300x250 AD
300x250 AD
Back to top