Slide
Slide
Slide
previous arrow
next arrow

ಅಕ್ರಮ ಸಾರಾಯಿ ಮಾರಾಟದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಹಲ್ಲೆ

300x250 AD

ಅಂಕೋಲಾ: ಗ್ರಾಮ ಸಭೆಯಲ್ಲಿ ಅಕ್ರಮ ಸಾರಾಯಿ ಮಾರಾಟ ಕುರಿತು ಪ್ರಸ್ತಾಪಿಸಿದ ಕಾರಣಕ್ಕಾಗಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ತಾಲೂಕಿನ ಕಲ್ಲೇಶ್ವರದಲ್ಲಿ ನಡೆದಿದೆ.
ನಿಲೇಶ ಸಿದ್ದಿ (36) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಅದೇ ಊರಿನ ಸುಭಾಶ ಸಿದ್ದಿ, ದೇವರಾಜ ಸಿದ್ದಿ ಹಾಗೂ ಆನಂದು ಸಿದ್ದಿ ಹಲ್ಲೆ ನಡೆಸಿದವರಾಗಿದ್ದಾರೆ. ಇತ್ತೀಚೆಗೆ ಡೋಂಗ್ರಿ ಗ್ರಾಮ ಪಂಚಾಯತದ ಸಭೆಯಲ್ಲಿ ಊರಿನ ಕುಂದು ಕೊರತೆಗಳ ಕುರಿತು ಚರ್ಚೆ ನಡೆಸುತ್ತಿದ್ದಾಗ ನಿಲೇಶ ಸಿದ್ದಿ ಇವರು ಊರಿನಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದೆ ಎಂಬುದಾಗಿ ಪ್ರಸ್ತಾಪಿಸಿದ್ದರು. ಇದರಿಂದ ಸಿಟ್ಟಾದ ಆರೋಪಿತರು ನ.6ರಂದು ಕಲ್ಲೇಶ್ವರ ಸರಕಾರಿ ಶಾಲೆಯ ಬಳಿ ನಿಲೇಶರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬಯ್ಯುತ್ತ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಸಾರಾಯಿ ಮಾರಾಟದ ಕುರಿತು ಮತ್ತೆ ವಿಷಯ ಎತ್ತಿದರೆ ಜೀವ ಸಹಿತ ಬಿಡುವುದಿಲ್ಲ ಎಂದಿದ್ದಾರೆ ಎಂಬುದಾಗಿ ಆರೋಪಿತರ ವಿರುದ್ಧ ಗಾಯಾಳು ನಿಲೇಶ ಸಿದ್ದಿ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ.

300x250 AD
Share This
300x250 AD
300x250 AD
300x250 AD
Back to top