Slide
Slide
Slide
previous arrow
next arrow

ಮಾದ್ನಕಳ್’ನ ಕೌಸಲ್ಯಾ ಹೆಗಡೆಗೆ ಶೌರ್ಯ ಪ್ರಶಸ್ತಿ ಘೋಷಣೆ

300x250 AD

ಸಿದ್ದಾಪುರ: ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆ ನೀಡುವ ಸಾಹಸಮಯ ಪ್ರದರ್ಶನವನ್ನು ತೋರಿಸಿರುವ ಮಕ್ಕಳಿಗೆ ಕೊಡ ಮಾಡುವ ರಾಜ್ಯ ಶೌರ್ಯ ಪ್ರಶಸ್ತಿಯು ಈ ಬಾರಿ ತಾಲೂಕಿನ ಕಾನಸೂರಿನ ಕೌಸಲ್ಯ ವೆಂಕಟರಮಣ ಹೆಗಡೆ ಎಂಬುವರಿಗೆ ಘೋಷಣೆಯಾಗಿದೆ.

ಪ್ರತಿ ವರ್ಷದಂತೆ ನವೆಂಬರ್ 14ರಂದು ಮಕ್ಕಳಿಗಾಗಿ ನೀಡುವ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಈ ಬಾರಿ ತಾಲೂಕಿನ ಕಾನಸೂರು ಸಮೀಪದ ಮಾದ್ನಕಳ್ ನಿವಾಸಿ ಕೌಸಲ್ಯ ಹೆಗಡೆಯವರಿಗೆ ಲಭಿಸಿದೆ.
ಜೀಪಿನ ಅಡಿಯಲ್ಲಿ ಸಿಲುಕಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ತನ್ನ ತಂದೆಯನ್ನು ಸುಮಾರು ಎರಡು ಕಿಲೋಮೀಟರ್ ದೂರ ಓಡಿ ಹೋಗಿ ಜನರನ್ನು ಕರೆತಂದು ತಂದೆಯನ್ನು ಬದುಕಿಸಿದ 11 ವರ್ಷದ ಬಾಲಕಿಯ ಸಮಯ ಪ್ರಜ್ಞೆಯ ಕುರಿತು ಪ್ರಶಂಸೆ ವ್ಯಕ್ತಗೊಂಡಿತ್ತು.
ಘಟನೆಯ ವಿವರ: 2021ರ ಮಾರ್ಚ್ 15ರಂದು ತನ್ನ ತಂದೆಯೊಂದಿಗೆ ಮಾವಿನಗುಂಡಿ ಸಮೀಪದ ಹಳ್ಳಿಯೊಂದರಲ್ಲಿ ಮಂಗಲ ಕಾರ್ಯಕ್ಕಾಗಿ ಅಡಿಗೆ ಮಾಡಲು ಹೊರಟಿದ್ದ ತಂದೆ ವೆಂಕಟರಮಣ ಹೆಗಡೆ ಅವರು ಚಲಾಯಿಸುತ್ತಿದ್ದ ಜೀಪು ಆಕಸ್ಮಿಕವಾಗಿ ಪಲ್ಟಿ ಹೊಡೆದು ಜೀಪಿನ ಅಡಿಯಲ್ಲಿ ತಂದೆ ವೆಂಕಟರಮಣ ಹೆಗಡೆ ಸಿಲುಕಿ ಕೊಂಡಿದ್ದರು. ಈ ಸಂದರ್ಭದಲ್ಲಿ ಜೀಪಿನಲ್ಲಿದ್ದ ಕೌಸಲ್ಯ ಹೆಗಡೆ ಹಾಗೂ ಆಕೆಯ ಐದು ವರ್ಷದ ತಮ್ಮ ತಂದೆಯನ್ನು ಬದುಕಿಸಲು ಹರಸಾಹವನ್ನು ಪಟ್ಟರು. ಇದೇ ವೇಳೆಯಲ್ಲಿ ಸಮಯ ಪ್ರಜ್ಞೆ ತೋರಿದ ಕೌಶಲ್ಯ ಹೆಗಡೆ ಘಟನೆ ನಡೆದ ಸ್ಥಳದಿಂದ ಸುಮಾರು ಎರಡು ಕಿಲೋ ಮೀಟರ್ ದೂರ ಓಡಿ ಹೋಗಿ ಅಲ್ಲಿಂದ ಜನರನ್ನು ಕರೆತಂದು ಜೀಪನ್ನು ಎತ್ತಿಸಿ ತಂದೆಯ ಜೀವವನ್ನು ಉಳಿಸಿದ್ದಾಳೆ. ಈ ಸಂದರ್ಭದಲ್ಲಿ ಬಾಲಕಿಯ ಈ ಸಾಹಸಪ್ರಜ್ಞೆ ಎಂಥವರನ್ನಾದರೂ ಬೆರಗುಗೊಳಿಸಿತ್ತು. ಕೌಸಲ್ಯ ವೆಂಕಟರಮಣ ಹೆಗಡೆ ಕಾನಸೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಬಾಲಕಿ ತನ್ನ ಸಣ್ಣ ವಯಸ್ಸಿನಲ್ಲಿಯೇ ಈ ರೀತಿಯ ಸಮಯಪ್ರಜ್ಞೆಯನ್ನು ತೋರಿ ತನ್ನ ತಂದೆಯನ್ನು ಬದುಕಿಸಿದ ಈಕೆಯ ಸಾಹಸವನ್ನು ನೋಡಿ ರಾಜ್ಯ ಸರ್ಕಾರ ನವೆಂಬರ್ 14ರಂದು ನೀಡುವ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಕೌಸಲ್ಯ ಅವಳಿಗೆ ನೀಡಿ ಗೌರವಿಸುತ್ತಿದೆ. ಕಾನಸೂರು ಸಮೀಪದ ಮಾದ್ನಕಳ್ ದ ವೆಂಕಟ್ರಮಣ ಹೆಗಡೆ ಹಾಗೂ ಪದ್ಮಾ ದಂಪತಿಗಳ ಪುತ್ರಿಯಾದ ಕೌಸಲ್ಯರ ಈ ಸಾಧನೆಗೆ ಕಾನಸೂರಿನ ನಾಗರಿಕರು ಶುಭ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top