Slide
Slide
Slide
previous arrow
next arrow

ಅಪಪ್ರಚಾರದಿಂದ ಪ್ರಗತಿಗೆ ಹಿನ್ನಡೆಯಾಗದು; TSS ಸಂಸ್ಥೆ ಸದೃಢವಾಗಿದೆ; ಎಂಡಿ ರವೀಶ ಹೆಗಡೆ ವಿಶ್ವಾಸ

300x250 AD

ಶಿರಸಿ: ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾಗಿ ಅಡಕೆ ಬೆಳೆಗಾರರ ಜೀವನಾಡಿಯಾದ ಟಿಎಸ್ಎಸ್ ಸಂಸ್ಥೆ ಈಗ ಶತಮಾನೋತ್ಸವದ ಸಂಭ್ರಮದಲ್ಲಿದೆ. ಹೀಗಾಗಿ, ಎಲ್ಲ ಸದಸ್ಯರನ್ನೂ ಸಂಘದ ಕಾರ್ಯ ಚಟುವಟಿಕೆ ನಡೆಯುವ ಸ್ಥಳಗಳಿಗೆ ಕರೆದೊಯ್ದು ಮಾಹಿತಿ ನೀಡುವ ಕಾರ್ಯಕ್ರಮವನ್ನು ಸಂಸ್ಥೆ ಹಮ್ಮಿಕೊಂಡಿದೆ ಎಂದು ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಕಾರ್ಯಚಟುವಟಿಕೆಗಳು ಹೆಚ್ಚಿದಂತೆಲ್ಲ ವಿವಿಧ ಕೇಂದ್ರಗಳಿಗೆ ವಿಸ್ತರಿಸಲಾಗಿದೆ. ಕಡವೆ, ವಡಗೇರಿ, ದಾಸನಕೊಪ್ಪ, ಕೋಣನಕೊಪ್ಪ ಇನ್ನಿತರ ಸ್ಥಳಗಳಲ್ಲಿ ವಿವಿಧ ಕಾರ್ಯ ನಡೆಸಲಾಗುತ್ತಿದೆ. ಸದಸ್ಯರು ಸಾಮಾನ್ಯವಾಗಿ ತಮ್ಮ ವ್ಯವಹಾರಕ್ಕೆ ಸಂಬಂಧಿಸಿ ಮಾತ್ರ ಭೇಟಿ ನೀಡಿ ವ್ಯವಹಾರ ನಡೆಸುತ್ತಾರೆ. ಸಹಜವಾಗಿಯೇ ಸಂಘದ ಇತರೆ ಚಟುವಟಿಕೆಗಳು ನಡೆಯುವ ಬೇರೆ ಬೇರೆ ಸ್ಥಳಗಳ ಪರಿಚಯ ಎಲ್ಲ ಸದಸ್ಯರಿಗೆ ಇರುವುದು ಕಡಿಮೆ. ಹಾಗಾಗಿ ಚಟುವಟಿಕೆಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಪ್ರತಿದಿನವೂ ಸದಸ್ಯರನ್ನು ಸಂಘದ ಸಮಗ್ರ ಚಟುವಟಿಕೆಗಳ ಕೇಂದ್ರಗಳಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ. ಆಸಕ್ತ ಸದಸ್ಯರು ಸಂಘದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ನಿಗದಿತ ದಿನದಂದು ಸಂಘದ ವಿವಿಧ ಕೇಂದ್ರಗಳ ಪ್ರವಾಸದಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಂಘದ ಸದಸ್ಯರ ಜೊತೆಯಲ್ಲಿ ಸದಸ್ಯರ ಮನೆಯ ಸದಸ್ಯರೂ ಸಹ ಪ್ರವಾಸದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು.

ಸಂಘದ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಮಾತನಾಡಿ, ಸಂಘದ ವಹಿವಾಟು ವಿಸ್ತರಣೆಯಿಂದಾಗಿ ಸಂಘದ ವಿರೋಧಿಗಳ ಸಂಖ್ಯೆಯಲ್ಲಿಯೂ ಸಹ ಹೆಚ್ಚಳವಾಗಿದೆ. ಸಂಘದ ವಹಿವಾಟಿನ ಬೆಳವಣಿಗೆ ಹಾಗೂ ವಿಸ್ತರಣೆಯಿಂದ ವ್ಯಾವಹಾರಿಕವಾಗಿ ಹಿನ್ನಡೆ ಅನುಭವಿಸುವಂತಾಗಿರುವ ಹಲವರು ವ್ಯವಸ್ಥಿತವಾಗಿ ಸಂಘದ ವಿರುದ್ಧ ಕಾರ್ಯಚಟುವಟಿಕೆ ನಡೆಸುತ್ತಿರುವುದು ನಮ್ಮ ಗಮನಕ್ಕಿದೆ. ಸಂಘದ ವ್ಯವಹಾರಗಳ ಹರಿವು ವಿಸ್ತಾರಗೊಂಡಂತೆಲ್ಲ ಈ ವಿರೋಧಿಗಳ ಗುಂಪಿಗೆ ಬೇರೆ ಬೇರೆ ವ್ಯಾವಹಾರಿಕ ಕ್ಷೇತ್ರದ ಜನರೂ ಸೇರ್ಪಡೆಗೊಳ್ಳುತ್ತಾ ಹೋಗುತ್ತಿದ್ದಾರೆ. ಸಂಘದ ಆಡಳಿತ ಚುಕ್ಕಾಣಿ ಹಿಡಿಯಬೇಕೆಂಬ ಆಸೆ ಭಗ್ನಗೊಂಡ ಕೆಲ ಸದಸ್ಯರ ಗುಂಪು ಸಂಘದ ವಿರುದ್ಧ ದ್ವೇಷ, ಅಸೂಯೆಯ ಮನೋಭಾವ ಹೊಂದಿತ್ತು. ನಂತರ ಸಂಘದ ಅಡಿಕೆ ವಹಿವಾಟಿನಿಂದ ಹಿನ್ನಡೆ ಅನುಭವಿಸಿದ ಕೆಲ ಅಡಿಕೆ ವರ್ತಕರು ಹಾಗೂ ಸೂಪರ್ ಮಾರ್ಕೆಟ್ ವ್ಯವಹಾರದ ಅಭಿವೃದ್ಧಿಯಿಂದ ಹಿನ್ನಡೆ ಹೊಂದಿದ ಇತರೆ ಕೆಲ ವರ್ತಕರು ಈ ಗುಂಪಿನಲ್ಲಿದ್ದವರನ್ನು ಪ್ರಚೋದಿಸಿ ಸಂಘದ ವಿರುದ್ಧ ವ್ಯವಸ್ಥಿತ ಅಪಪ್ರಚಾರದಲ್ಲಿ ತೊಡಗಿದರು. ಇಷ್ಟಾಗಿಯೂ ಸಂಘದ ಪ್ರಗತಿ ಮುಂದುವರೆಯುತ್ತಲೇ ಹೋಗಿದೆ. ಇದೀಗ ಮತ್ತೊಮ್ಮೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಗುಂಪಿನ ದ್ವೇಷ-ಅಸೂಯೆಯ ಅಗ್ನಿಗೆ ತುಪ್ಪ ಸುರಿಯುವ ಕೆಲಸ
ಆರಂಭವಾಗಿದೆ. ಸಂಘದ ಪ್ರಗತಿಯನ್ನು ಸಹಿಸಲಾಗದವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಸಂಘದ ಕುರಿತು ಇಲ್ಲಸಲ್ಲದ ಆಪಾದನೆ ಮಾಡಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಸಂಘದ ಆರ್ಥಿಕತೆಯ ಕುರಿತು ಸದಸ್ಯರಲ್ಲಿ ಅಪನಂಬಿಕೆ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಸದಸ್ಯರಲ್ಲಿ ಸಂಘದ ಆರ್ಥಿಕ ಸದೃಢತೆಯ ಬಗ್ಗೆಯಾಗಲೀ ಅಥವಾ ಆಡಳಿತಾತ್ಮಕ ಹಾಗೂ ವ್ಯಾವಹಾರಿಕ ಪಾರದರ್ಶಕತೆಯ ಬಗ್ಗೆಯಾಗಲೀ ಯಾವುದೇ ಗೊಂದಲ-ಸಂದೇಹ ಬೇಡ ಎಂಬ ಕಾರಣದಿಂದ ಈ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು.

300x250 AD

ಸಂಸ್ಥೆಯ ಸದಸ್ಯರಿಗೆ ಸೇವೆ-ಸೌಲಭ್ಯ:
ಕೆಲವರ ಆಪಾದನೆ ಕುರಿತು ಸ್ಪಷ್ಟನೆ ನೀಡಿದ ವ್ಯವಸ್ಥಾಪಕ ರವೀಶ ಹೆಗಡೆ, ಟಿಎಸ್ಎಸ್ ನಿಂದ ಶುಂಠಿ ಖರೀದಿಸಿ ಸಂಸ್ಕರಿಸುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಕಳೆದ ಕೆಲ ವರ್ಷಗಳ ಹಿಂದೆ 42 ಕೋಟಿ ರೂ. ಬಂಡವಾಳ ಸಹ ತೊಡಗಿಸಿದ್ದೆವು. ಆದರೆ, ಮಳೆಯ ಕಾರಣ ಗುಣಮಟ್ಟದ ಉತ್ಪಾದನೆ ಸಾಧ್ಯವಾಗದೇ 12 ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಆದರೆ ಸಂಸ್ಥೆ ಅಡಿಕೆಯ ಜೊತೆಜೊತೆಗೆ ಉಳಿದ ಕಮರ್ಷಿಯಲ್ ಚಟುವಟಿಕೆ ಕೈಗೊಂಡಿದ್ದರ ಪರಿಣಾಮ ಇಂದು ಸಂಸ್ಥೆಯ ರೈತರಿಗೆ ಹೆಚ್ಚಿನ ಸೇವೆಯನ್ನು, ಸೌಲಭ್ಯವನ್ನು ನೀಡುವಂತಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಇತರ ನಿರ್ದೇಶಕರುಗಳು ಇದ್ದರು.

Share This
300x250 AD
300x250 AD
300x250 AD
Back to top