• Slide
  Slide
  Slide
  previous arrow
  next arrow
 • ನ.13ಕ್ಕೆ ‘ವಿಸ್ತಾರ ಕನ್ನಡ ಸಂಭ್ರಮ’ : ಗಾನಸುಧೆ ಹರಿಸಲಿರುವ ಡಾ.ವಿದ್ಯಾಭೂಷಣ್

  300x250 AD

  ಶಿರಸಿ: ಇತ್ತೀಚಿಗಷ್ಟೇ ಲೋಕಾರ್ಪಣೆಗೊಂಡ ವಿಸ್ತಾರ ನ್ಯೂಸ್ ರವರ ‘ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮವು ನಗರದ ತೋಟಿಗರ ಕಲ್ಯಾಣ ಮಂಟಪದಲ್ಲಿ ನವೆಂಬರ್ 13, ರವಿವಾರದಂದು ಆಯೋಜನೆಗೊಂಡಿದೆ. ಕಾರ್ಯಕ್ರಮದ ಕೇಂದ್ರಬಿಂದು ‘ವಿಸ್ತಾರ ಗಾನಸುಧೆ’ ಕಾರ್ಯಕ್ರಮಕ್ಕೆ ಸಂಗೀತ ವಿದ್ಯಾನಿಧಿ ಡಾ.ವಿದ್ಯಾಭೂಷಣ ಬೆಂಗಳೂರು ಆಗಮಿಸಲಿದ್ದಾರೆ.

  ಈ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ್ ಹೆಬ್ಬಾರ್ ಉದ್ಘಾಟಿಸಲಿದ್ದು, ನಾಮಫಲಕ ಅನಾವರಣವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಲಿದ್ದಾರೆ.
  ವಿಸ್ತಾರ ಮೀಡಿಯಾ ನಿರ್ದೇಶಕ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್, ರಾಜಧಾನಿ ಸೌಹಾರ್ದ ವಿವಿಧೋದ್ದೇಶಗಳ ಸಹಕಾರಿ ನಿಯಮಿತದ ಅಧ್ಯಕ್ಷ ಕಿರಣ್ ಚಿತ್ರಕಾರ್, ಟಿ.ಆರ್.ಸಿ ಬ್ಯಾಂಕ್ ಅಧ್ಯಕ್ಷ, ಟಿಎಸ್ಎಸ್ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಕಸಾಪ ಶಿರಸಿ ಘಟಕ ಅಧ್ಯಕ್ಷ ಜಿ ಸುಬ್ರಾಯ್ ಭಟ್ ಬಕ್ಕಳ ಆಗಮಿಸಲಿದ್ದಾರೆ.

  ವಿಸ್ತಾರ ಮೀಡಿಯಾದ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕ ಎಚ್.ವಿ. ಧರ್ಮೇಶ್, ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಿಇಓ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಉಪ ವಿಭಾಗಾಧಿಕಾರಿ ಆರ್. ದೇವರಾಜ್, ಡಿ.ವೈ.ಎಸ್.ಪಿ ರವಿ ಡಿ.ನಾಯ್ಕ್ ಗೌರವ ಉಪಸ್ಥಿತಿ ನೀಡಲಿದ್ದಾರೆ.
  ಈ ಸಂದರ್ಭದಲ್ಲಿ ಶಿರಸಿಯ ಹಿರಿಯ ಸಜ್ಜನ ಕಾಶಿನಾಥ ಮೂಡಿ, ರಾಘವೇಂದ್ರ ಮಠದ ಅಧ್ಯಕ್ಷ ಡಿ.ಡಿ.ಮಾಡಗೇರಿ, ರುದ್ರಭೂಮಿ ಅಭಿವೃದ್ಧಿಕಾರ ವಿ.ಪಿ.ಹೆಗಡೆ ವೈಶಾಲಿ, ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ್, ನಗರಸಭೆ ಸದಸ್ಯ ಕಿರಣ್ ಆನೂರು ಶೆಟ್ಟರ್ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
  ವಿಸ್ತಾರ ಗಾನಸುಧೆ ಕಾರ್ಯಕ್ರಮದಲ್ಲಿ ಸಂಗೀತ ವಿದ್ಯಾನಿಧಿ ಡಾ. ವಿದ್ಯಾಭೂಷಣ್ ಜೊತೆ ಕುಮಾರಿ ಮೇಧಾ ವಿದ್ಯಾಭೂಷಣ್ ಸಂಗೀತ ಸುಧೆಯನ್ನು ಹರಿಸಲಿದ್ದು ಇವರಿಗೆ ವಯೋಲಿನ್’ನಲ್ಲಿ ವಿಶ್ವಜಿತ್ ಮತ್ತೂರು, ಮೃದಂಗದಲ್ಲಿ ನಾಗೇಂದ್ರ ಪ್ರಸಾದ, ತಬಲಾದಲ್ಲಿ ಸುದತ್ತ ಶ್ರೀಪಾದ ಸಾತ್ ನೀಡಲಿದ್ದಾರೆ. ಕಾರ್ಯಕ್ರಮವನ್ನು ಗಿರಿಧರ್ ಕಬ್ನಳ್ಳಿ ನಿರ್ವಹಿಸಲಿದ್ದು ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

  300x250 AD

  Share This
  300x250 AD
  300x250 AD
  300x250 AD
  Leaderboard Ad
  Back to top