Slide
Slide
Slide
previous arrow
next arrow

ಬಿಕಾಂನಲ್ಲಿ ಎಸ್‌ಡಿಎಂ ವಿದ್ಯಾರ್ಥಿಗಳ ಸಾಧನೆ

300x250 AD

ಹೊನ್ನಾವರ: ಕವಿವಿ ಧಾರವಾಡ ಇವರು ನಡೆಸಿದ ಬಿಕಾಂ 6ನೇ ಸಮಿಸ್ಟರ್‌ನ ಪರೀಕ್ಷೆಯಲ್ಲಿ ಎಂಪಿಇ ಸೊಸೈಟಿಯ ಎಸ್‌ಡಿಎಂ ಪದವಿ ಮಹಾವಿದ್ಯಾಲಯದ ಬಿಕಾಂ 6ನೇ ಸೆಮಿಸ್ಟರ್‌ನ 127 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ, 21 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರ ಮೂಲಕ ಶೇ 94.48 ಫಲಿತಾಂಶ ದಾಖಲಾಗಿದೆ.
ರಾಚೆಲ್ ಮಚಾಡೋ 97.57%, ರಮ್ಯಾ ಹೆಗಡೆ 97.14% ಹಾಗೂ ಝಾಕಿರಾಬೇಗಂ ಆಸಿಫ್ 96.43% ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ವಿ.ಎಂ.ಭಂಡಾರಿ, ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮಿ ನಾಯ್ಕ, ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top