Slide
Slide
Slide
previous arrow
next arrow

ಕುಮಟಾ ವೈಭವದಲ್ಲಿ ಈ ವರ್ಷ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ: ಮಂಜುನಾಥ ನಾಯ್ಕ

300x250 AD

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ನ.12ರಿಂದ 16ವರೆಗೆ ನಡೆಯಲಿರುವ ಕುಮಟಾ ವೈಭವದಲ್ಲಿ ಕನ್ನಡ ಮತ್ತು ಹಿಂದಿಯ ಖ್ಯಾತ ಕಲಾವಿದರು ಪಾಲ್ಗೊಳ್ಳುವ ಮೂಲಕ ಈ ವರ್ಷ ಅದ್ಧೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ತಾಂಡವ ಕಲಾ ನಿಕೇತನದ ಅಧ್ಯಕ್ಷ ಮಂಜುನಾಥ ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ನಡೆಯುವ ಕುಮಟಾ ವೈಭವದಲ್ಲಿ ಕೆಜಿಎಫ್ ಮತ್ತು ಶ್ರೀವಲ್ಲಿ ಚಿತ್ರದ ಕಲಾವಿದರು, ಗಾಯಕರು, ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಯ ಕಲಾವಿದರು,ಕಲರ್ಸ್ ಕನ್ನಡ ವಾಹಿನಿಯ ಸಂದೇಶ, ದಿವ್ಯಾ ರಾಮಚಂದ್ರ ಪಾಲ್ಗೊಳ್ಳಲಿದ್ದಾರೆ. ಇಂಡಿಯನ್ ಐಡಿಯಲ್ ಟೀಮ್ ಸೇರಿದಂತೆ ಒಂದು ದಿನ ಕನ್ನಡದ ಖ್ಯಾತ ಕಲಾವಿದರು ಆಗಮಿಸುವ ನೀರಿಕ್ಷೆಯಿದೆ. ಇದನ್ನು ಕುಮಟಾ ವೈಭವ ಕಾರ್ಯಕ್ರಮದ 2 ದಿನ ಮುಂಚಿತವಾಗಿ ಬಹಿರಂಗಪಡಿಸಲಾಗುವುದು ಎಂದರು.
ಯಕ್ಷಗಾನ, ಭರತನಾಟ್ಯ, ನೃತ್ಯ ಸೇರಿದಂತೆ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತ, ಗುಮಟೆಪಾಂಗ್, ಸಿದ್ಧಿ ಜನಾಂಗದ ನೃತ್ಯಗಳಿಗೆ ಅವಕಾಶ ನೀಡಿದ್ದೇವೆ. ಕುಮಟಾ ವೈಭವ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿಮೀತವಾಗಿರದೇ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಸದಾ ನೆನಪಿಸುವಂತಹ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಕುಮಟಾದ ಸಂಸ್ಕೃತಿಯ ಪ್ರತೀಕವಾಗಿ ಹಾಲಕ್ಕಿ ಸಮಾಜದವರಿಂದ ನ.11 ಮತ್ತು 13ರಂದು ಹಾಲಕ್ಕಿ ಚುಂಚಾದ್ರಿ ವಾಲಿಬಾಲ್ ಕಪ್ ನಡೆಯಲಿದ್ದು, ಅದಕ್ಕೆ ಕುಮಟಾ ವೈಭವ ಸಮಿತಿ ಸಂಪೂರ್ಣ ಸಹಕಾರ ನೀಡುತ್ತೇವೆ. 5 ಸಾಧಕರಿಗೆ ಮಾಶಾಸನ ನೀಡುತ್ತೇವೆ ಎಂದರು.
ಹಾಲಕ್ಕಿ ಸಮಾಜದ ಮುಖಂಡ ಮೋಹನದಾಸ ಗೌಡ ಹಾಗೂ ವಕೀಲ ವೆಂಕಟೇಶ ಗೌಡ ಮಾತನಾಡಿ, ಕುಮಟಾ ವೈಭವದ ಜತೆಯಲ್ಲಿ ಹೊನಲುಬೆಳಕಿನ ಜಿಲ್ಲಾ ಮಟ್ಟದ ಹಾಲಕ್ಕಿ ಚುಂಚಾದ್ರಿ ವಾಲಿಬಾಲ್ ಪಂದ್ಯಾವಳಿ ನ.11 ರಂದು ಮಧ್ಯಾಹ್ನ 2 ಘಂಟೆಗೆ ಉದ್ಘಾಟನೆಗೊಳ್ಳಲಿದ್ದು, ಆದಿಚುಂಚನಗಿರಿ ಮಠದ ಪ್ರಧಾನಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ ಉದ್ಘಾಟನೆಗೊಳಿಸಲಿ, ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಸಮಾರೋಪದಲ್ಲಿ ಮಿರ್ಜಾನ ಶಾಖಾಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಗೌಡ, ತುಳಸಿ ಗೌಡ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ತಾಲೂಕಿನ 7 ಸೀಮೆಯ ಗೌಡರು ಕೂಡ ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುಮಟಾ ವೈಭವ ಸಮಿತಿಯ ನಾಗೇಶ ನಾಯ್ಕ ಕಲಭಾಗ, ರವಿ ಶೇಟ್, ರವಿ ಗಾವಡಿ, ಮಂಜು ಜೈನ್, ನಿರಂಜನ ನಾಯ್ಕ, ಗಣೇಶ ನಾಯ್ಕ, ನರಸಿಂಹ ಭಟ್ಟ ಕಡತೋಕಾ, ನಾರಾಯಣ ಗೌಡ, ಮಾರುತಿ ಗೌಡ, ವಿನಯ ಗೌಡ, ಪ್ರಹ್ಲಾದ ಗೌಡ ಹಾಗೂ ಟೀಮ್ ವಾರಿಯರ್ಸ್ ತಂಡದ ಪದಾಧಿಕಾರಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top