• Slide
    Slide
    Slide
    previous arrow
    next arrow
  • ಗಮನ ಸೆಳೆದ ಕೃಷ್ಣ ಗೌಡರ ಪೆನ್ಸಿಲ್ ಆರ್ಟ್

    300x250 AD

    ಹೊನ್ನಾವರ: ತಾಲೂಕಿನ ಮಾವಿನಕುರ್ವಾದ ಯುವಕ ಕೃಷ್ಣ ಗೌಡ ಅವರು ಚಿತ್ರಿಸಿರುವ ಪೆನ್ಸಿಲ್ ಆರ್ಟ್ ಮತ್ತೊಮ್ಮೆ ಎಲ್ಲರ ಗಮನಸೆಳೆಯುತ್ತಿದೆ.
    ಯಾವುದೇ ಕಲಾಶಾಲೆಯಿಂದ ತರಬೇತಿ ಪಡೆಯದಿದ್ದರೂ ವಿದ್ಯಾರ್ಥಿದೆಸೆಯಲ್ಲಿರುವಾಗ ಪೆನ್ಸಿಲ್ ಆರ್ಟ್ನಲ್ಲಿ ಪ್ರಭುತ್ವ ಸಾಧಿಸಿರುವ ಕೃಷ್ಣ, ಅನೇಕ ಚಿತ್ರವನ್ನು ಬಿಡಿಸುವ ಮೂಲಕ ಎಲ್ಲರನ್ನು ತನ್ನತ್ತ ಸೆಳೆದಿದ್ದಾರೆ. ಚಿಕ್ಕ ಮಕ್ಕಳ ನಗು, ಸಿನಿಮಾ ರಂಗದ ಕಲಾವಿದರು, ಜನಪ್ರತಿನಿಧಿಗಳು, ಮಠಾಧೀಶರ ಭಾವಚಿತ್ರ ಬಿಡಿಸುವ ಮೂಲಕ ಮೆಚ್ಚುಗೆ ಪಡೆದಿದ್ದರು.
    ಇವರು ಬಿಡಿಸಿದ ಚಿತ್ರಗಳನ್ನು ನೋಡುತ್ತಾ ಹೋದರೆ ಮೂಕವಿಸ್ಮಿತರಾಗಿಸುತ್ತದೆ. ತಕ್ಷಣಕ್ಕೆ ನೋಡಿದರೆ ಮೂಲ ಚಿತ್ರ ಯಾವುದು ಬಿಡಿಸಿದ ಚಿತ್ರ ಯಾವುದು ಎಂದು ಗುರುತಿಸುವುದು ಕಷ್ಟವಾಗುತ್ತದೆ. ಅಂತಹ ಅದ್ಭುತ ಚಿತ್ರಗಳನ್ನು ಪೆನ್ಸಿಲ್‌ನಲ್ಲಿ ಸೃಷ್ಟಿಸುವ ಕೃಷ್ಣ ಏಕಲವ್ಯನಂತೆ ಮನಸ್ಸನ್ನೇ ಗುರುವಾಗಿಸಿಕೊಂಡು ತಪಸ್ಸಿನಂತ ಪರಿಶ್ರಮದಿಂದ ಕಲೆಯನ್ನು ಒಲಿಸಿಕೊಂಡ ಹುಡುಗನಾಗಿದ್ದು, ಇತ್ತೀಚಿಗೆ ಬಿಡಿಸಿದ ಪದ್ಮಶ್ರೀ ಪ್ರಶಸ್ತ್ರೀ ವಿಜೇತರಾದ ತುಳಸಿಗೌಡ ಇವರ ಚಿತ್ರ ಎಲ್ಲರನ್ನು ಹುಬ್ಬೇರಿಸುವಂತೆ ಮಾಡುತ್ತಿದೆ.
    ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು ಇವರು ರಾಜ್ಯೋತ್ಸವದಂದು ಆಯೋಜಿಸಿದ ಸ್ಪರ್ಧೆಗೆ ಈ ಆರ್ಟ್ಸ್ ಆಯ್ಕೆಯಾಗಿದೆ. ಅಲ್ಲದೆ ಇದರ ಜೊತೆಗೆ ಇನ್ನೊರ್ವ ಪ್ರಶಸ್ತ್ರಿ ಪುರಸ್ಕೃತರಾದ ಸುಕ್ರಜ್ಜಿ ಆರ್ಟ್ ಕೂಡಾ ಬಿಡಿಸುತ್ತಿರುವುದು ವಿಶೇಷವಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top