ಜೊಯಿಡಾ: ಪಶ್ಚಿಮ ಘಟ್ಟ ಉಳಿಯಬೇಕಾದರೆ ಕಾಡು, ಪ್ರಾಣಿಗಳು ಹಾಗೂ ತಲತಲಾಂತರದಿಂದ ಈ ಪ್ರದೇಶದಲ್ಲಿ ವಾಸಿಸುವ ಜನವಸತಿ ಇರಬೇಕು. ಸಹಬಾಳ್ವೆಯ ಮೂಲಕ ಬಾಳಬೇಕಾಗಿದೆ ಎಂದು ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಪ್ರಾಧಿಕಾರದ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದರು.
ಅವರು ಕುಂಬಾರವಾಡಾ ಅರಣ್ಯಾಧಿಕಾರಿಗಳ ಕಛೇರಿ ಮತ್ತು ಅಖೇತಿ ಗ್ರಾಮ ಪಂಚಾಯತಗೆ ಭೇಟಿ ನೀಡಿ ಇಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ಪಶ್ಚಿಮ ಘಟ್ಟದ ವ್ಯಾಪ್ತಿಗೆ ಬರುವ ಕಾಡಿನ ಸಂಪತ್ತು ಇಲ್ಲಿಯವರು ಸಂರಕ್ಷಣೆ ಮಾಡಿದ ಬಗ್ಗೆ ಖುಷಿ ಇದೆ. ಇದರ ರಕ್ಷಣೆಯ ಜೊತೆಯಲ್ಲಿ ಈ ಪ್ರದೇಶದ ವ್ಯಾಪ್ಯಿಯಲ್ಲಿ ಬರುವ ಜನರ ಸಂಕಕ್ಷಣೆಯೂ ಬೇಕು. ಇವರಿಗೆ ಮೂಲಭೂತ ಸೌಲಭ್ಯವು ಕಲ್ಪಿಸಬೇಕು. ಜೋತೆಯಲ್ಲಿ ಕಾಡಿನ ಸಂರಕ್ಷಣೆಯಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮಾನವಿಯತೆಯಿಂದ ವರ್ತಿಸಬೇಕಾಗಿದೆ ಎಂದು ಅರಣ್ಯ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಕಾಡು ಪ್ರಾಣಿಗಳಿಂದ ಬೆಳೆ, ಜೀವ ಹಾನಿ ಮಾಡಲಾದ ರೈತರಿಗೆ ಸರಿಯಾದ ಸಂದರ್ಭದಲ್ಲಿ ಪರಿಹಾರ ದೊರೆಯುವುದಿಲ್ಲ ಎಂಬ ಆರೋಪ ಇದೆ. ಇದಕ್ಕೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಕಾಡು ಪ್ರಾಣಿಗಳು ಮತ್ತು ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರ ಮಧ್ಯೆ ಸಮನ್ವಯತೆ ಕಾಪಾಡಬೇಕಾದ ಅಗತ್ಯವಿದೆ ಎಂದರು.
ಇದಕ್ಕೂ ಮೊದಲು ಕಾತೇಲಿ, ಜೊಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಘಟಕ ಅಧ್ಯಕ್ಷ ಸಂತೋಷ ರೇಡಕರ, ಅಖೇತಿ ಗ್ರಾ.ಪಂ. ಸದಸ್ಯ ಗುರಪ್ಪ ಹಣಬರ, ಶಿವಾಜಿ ಗೋಸಾವಿ, ಗಿರೀಶ್ ಗೋಸಾವಿ, ರಮೇಶ ಗಾವಡಾ, ದೀಪಕ ದೇಸಾಯಿ, ಲಕ್ಷ್ಮಣ ದೇಸಾಯಿ, ಸುಭಾಷ ಮಾಂಜ್ರೇಕರ, ಜೊಯಿಡಾ ಗ್ರಾ.ಪಂ. ಅಧ್ಯಕ್ಷ ಅರುಣ ಕಾಮರೆಕರ, ಆಕಾಶ ಅನಸ್ಕರ, ಅನಿಲ ಪಟ್ಚೆ, ಸಂತೋಷ ಸಾವಂತ ಸೇರಿದಂತೆ ಬಹಳಷ್ಟು ಬಿಜೆಪಿ ಕಾರ್ಯಕರ್ತರು ಇದ್ದರು.
ಜೊಯಿಡಾಕ್ಕೆ ಗೋವಿಂದ ನಾಯ್ಕ ಭೇಟಿ
