Slide
Slide
Slide
previous arrow
next arrow

ಮೆಮು ರೈಲು ಸಂಚಾರ ಪುನರಾರಂಭಕ್ಕೆ ಮಾಧವ ನಾಯಕ ಆಗ್ರಹ

300x250 AD

ಕಾರವಾರ: ರೈಲು ಸಂಖ್ಯೆ: 70105/ 06 ಮಡಗಾಂವ್- ಮಂಗಳೂರು- ಮಡಗಾಂವ್ ಮೆಮು (ಎಂಇಎಮ್‌ಯು)ವನ್ನು ಕೂಡಲೇ ಪುನರಾರಂಭಿಸುವಂತೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ.
ಭಾನುವಾರ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ ಮಡಗಾಂವ್‌ನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಮೆಮು ರೈಲು ಪ್ರಮುಖವಾಗಿ ಉಡುಪಿ, ಮಂಗಳೂರು ಭಾಗದ ಆಸ್ಪತ್ರೆಗೆ ತೆರಳುವ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಅನುಕೂಲವಾಗಿತ್ತು. ಕಾರ್ಯದ ನಿಮಿತ್ತ ಗೋವಾ ಹೋಗಿಬರುವವರಿಗೂ ಬಳಕೆಯಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಈ ರೈಲು ಸಂಚಾರವನ್ನು ಕೊಂಕಣ ರೈಲ್ವೆ ಸ್ಥಗಿತಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.
ಹಳಿ ವಿದ್ಯುದೀಕರಣ ಹಾಗೂ ಕೋವಿಡ್ ಕಾರಣವೊಡ್ಡಿ ಈ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಉಳಿದೆಲ್ಲ ರೈಲುಗಳೂ ಸಂಚರಿಸುತ್ತಿದ್ದು, ಮೆಮು ಸಂಚಾರವನ್ನೂ ಶೀಘ್ರವೇ ಪುನರಾರಂಭಿಸಬೇಕಿದೆ. ಮೆಮು ಇಲ್ಲದೆ ಸಾಕಷ್ಟು ರೋಗಿಗಳಿಗೆ ಅನಾನುಕೂಲವಾಗುತ್ತಿದ್ದು, ಹೊರ ಜಿಲ್ಲೆಯ ಆಸ್ಪತ್ರೆಗಳಿಗೆ ತೆರಳುವ ಬಡಜನರಿಗೆ ಆರ್ಥಿಕ ಹೊಡೆತ ನೀಡಿದಂತಾಗಿದೆ. ಈ ಮೊದಲಿನಂತೆ ಈ ರೈಲಿನ ಸಂಚಾರವನ್ನು ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆಯೊಂದಿಗೆ ಪುನರಾರಂಭಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈಲು ರೋಕೋ ಪ್ರತಿಭಟನೆ ನಡೆಸಬೇಕಾದೀತು ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆ ಅನಿವಾರ್ಯ…
ಈಗ ಮಾಡಿರುವ ವೇಳಾಪಟ್ಟಿಯಲ್ಲಿ ನಿಲುಗಡೆ ಸ್ಥಳವಾದ ಹಾರವಾಡ, ಮಿರ್ಜಾನ, ಚಿತ್ರಾಪುರಗಳನ್ನು ಕೈಬಿಡಲಾಗಿದೆ ಎಂಬ ಮಾಹಿತಿ ಇದೆ. ಒಂದುವೇಳೆ ಉತ್ತರಕನ್ನಡ ಜಿಲ್ಲೆಯ ಈ ಮೊದಲಿನ ನಿಲುಗಡೆಯಲ್ಲಿ ಬದಲಾವಣೆ ಆದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಮಾಧವ ನಾಯಕ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top