ಯಲ್ಲಾಪುರ: ಕಳೆದ ಎರಡು ವರ್ಷಗಳಿಂದ ಮಹಿಳೆಯರಿಗೆ ಮುಟ್ಟಿನ ನೈರ್ಮಲ್ಯ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ಮಾರಾಟ ಸಂಸ್ಥೆ ಕಾಂಫಿ ಕಪ್ ಅನೇಕ ಸಾಮಾಜಿಕ ಚಟುವಟಿಕೆಗಳನ್ನು, ಉಚಿತ ಮಾಹಿತಿ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಸಂಘಟಿಸುತ್ತಾ ಇದ್ದು ಪ್ರಶಂಸೆಗೆ ಪಾತ್ರವಾಗಿದೆ.
ತಾಲೂಕಿನ ಹಿತ್ಲಳ್ಳಿಯಲ್ಲಿ ಕಾಂಫಿ ಕಪ್ ಫೌಂಡರ್ ದಿವ್ಯಾ ಗೋಕರ್ಣ ಅವರು ಮುಟ್ಟಿನ ನೈರ್ಮಲ್ಯದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿದರು. SMC ಸ್ಕ್ವೇರೇಡ್ ಅನ್ನೊ ಸಾಪ್ಟವೇರ್ ಕಂಪನಿಯ CSR ನಿಧಿಯಡಿ ಸಮನ್ವಯ ಸಾಧಿಸಿ ನೂರಕ್ಕೂ ಅಧಿಕ ಮಹಿಳೆಯರಿಗೆ ಉಚಿತ ಕಪ್ ವಿತರಿಸಲಾಯಿತು. ಸಭೆಯ ಕುರಿತು ಮಾತನಾಡಿದ ದಿವ್ಯಾ ಗೋಕರ್ಣ ಅವರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಸಿ ಮುನ್ನುರಕ್ಕೂ ಅಧಿಕ ಕಪ್ ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಿತ್ಲಳ್ಳಿ ಸೊಸೈಟಿ ಅಧ್ಯಕ್ಷರಾದ ಎಂ.ಬಿ.ಶೇಟ್ ಹಾಗೂ ಕಾರ್ಯಕ್ರಮದ ಗ್ರಾಮ ಪಂಚಾಯತ ಉಪಾಧ್ಯಕ್ಷರು, ಮಾಜಿ ತಾಲೂಕ ಪಂಚಾಯತ್ ಸದಸ್ಯರಾದ ಶ್ರೀಮತಿ ರಾಧಾ ಹೆಗಡೆ ಹಾಗೂ SMC ಸ್ಕ್ವೇರ್ ಕಂಪನಿಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.