Slide
Slide
Slide
previous arrow
next arrow

ನೆಮ್ಮದಿ ಕುಟೀರದಲ್ಲಿ‌ ಯಶಸ್ವಿಗೊಂಡ ಸಾಹಿತ್ಯ ಕಮ್ಮಟ

300x250 AD

ಶಿರಸಿ: ನಗರದ ನೆಮ್ಮದಿ ಕುಟೀರದಲ್ಲಿ‌ ‘ಕಲಿಕಾ ಕಮ್ಮಟ ಮತ್ತು ಕವಿಗೋಷ್ಟಿ ಹಾಗೂ ಕಥಾವಾಚನ’ ವನ್ನು ಸಾಹಿತ್ಯ ಚಿಂತಕರ ಚಾವಡಿ,ಶಿರಸಿ ಇವರ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ನಾಟಿ ವೈದ್ಯ ಸಾಹಿತಿ ಮಂಜುನಾಥ ಹೆಗಡೆ ಹೂಡ್ಲಮನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಎಲೆಮರೆಯ ಬರಹಗಾರರಿಗೆ, ಯುವ ಕವಿ, ಕವಯತ್ರಿಗಳಿಗೆ ಚಿಂತನ ಚಾವಡಿಯು ವೇದಿಕೆಯನ್ನು ಒದಗಿಸಿ ಅವರುಗಳ ಪ್ರತಿಭೆಯನ್ನು ಪ್ರಪಂಚಕ್ಕೆ ಪಸರಿಸುವ ಕೆಲಸ ಮಾಡುತ್ತಿದೆ‌ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿ ದಿವಸ್ಪತಿ ಭಟ್ ಮಾತನಾಡಿ, ನಿರಂತರ ಕಲಿಕೆ ನಮ್ಮ ಸಾಹಿತ್ಯಿಕ ಮತ್ತು ಸಾಮಾಜಿಕ ಜೀವಂತಿಕೆಯ ಸಂಕೇತ. ನಿಂತ ನೀರು ಕೊಳೆಯುತ್ತದೆ. ಹಾಗಾಗಿ ಹೊಸ ನೀರು ಅಧ್ಯಯನದ ಮೂಲಕ ಹರಿದು ಬಂದಾಗ ಸಾಹಿತ್ಯ ಸಮೃದ್ಧವಾಗುತ್ತದೆ. ಓದಿನಲ್ಲಿರುವ ಆಸಕ್ತಿ, ಅಭಿರುಚಿ ನಮ್ಮಲ್ಲಿರುವ ಸಾಹಿತ್ಯದ ಹಸಿವನ್ನು ನೀಗಿಸುತ್ತದೆ ಎಂದರು.ಚಿಂತನ ಚಾವಡಿಯ ಎಸ್.ಎಸ್.ಭಟ್ ಸಭಾಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕವಯತ್ರಿ ರೇವತಿ ಭಟ್, ಭಾವನೆಗಳನ್ನು ಹೊರ ಹಾಕಲು ಇರುವ ಸುಲಭ ಸಾಧನವೇ ಭಾಷಾ ಮಾಧ್ಯಮ. ಸಾಹಿತಿಯಾದವರು ಭಾಷೆಯನ್ನು ದುಡಿಸಿಕೊಳ್ಳುವವರು‌‌ ಎಂದರು. ಹನಿಗವನ, ಮಿಡಿಗವನ, ಮಿನಿಗವನ, ಕವನ ಕುರಿತಾಗಿ ಮಾತನ್ನಾಡಿದರು.

300x250 AD

ಹಿರಿಯ ಸಾಹಿತಿ ಡಿ.ಎಸ್.ನಾಯ್ಕ ಮಾತನ್ನಾಡಿ ದೇಹಕ್ಕೆ ಮುಪ್ಪಾಗಬಹುದು ಮನಸ್ಸಿಗೆ ಮುಪ್ಪಿಲ್ಲ. ಸಾಹಿತ್ಯ ಯಾವಾಗಲೂ ಸಕಾರಾತ್ಮಕ ಚಿಂತನೆ ರೂಢಿಸುತ್ತದೆ ಎಂದರು.

ರಾಜೂ ನಾಯ್ಕ್ ಮಾತನಾಡಿ, ಗಝಲ್, ಟಂಕಾ ಶೈಲಿ, ಮುಕ್ತಕ ಮತ್ತು ಸಾಹಿತ್ಯದ ವಿವಿಧ ಪ್ರಕಾರಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಚುಟುಕು ಕವಿ ದತ್ತಗುರು ಕಂಠಿ, ಕಥೆಗಾರ ಕೆ.ಮಹೇಶ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾಂಪ್ರದಾಯಕ ಹಾಡುಗಾರ್ತಿಗಳಾದ ಶೋಭಾ ಭಟ್ ಮತ್ತು ತುಂಗಾ ಭಟ್ ಇವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಕವಿಗೋಷ್ಟಿಯಲ್ಲಿ ‌ ಜಲಜಾಕ್ಷಿ ಶೆಟ್ಟಿ, ವಿಜಯಾ ಶಾನಭಾಗ, ರಾಜಲಕ್ಷ್ಮಿ ಬೊಮ್ಮನಳ್ಳಿ, ಭವ್ಯಾ ಹೊಳೆಯೂರು,‌ಕು.ಬಿಂದೂ ನಾಯ್ಕ, ಕು. ಅನು, ಉಮೇಶ ದೈವಜ್ಞ. ಸುಜಾತಾ ದಂಟಕಲ್, ನಿರ್ಮಲಾ ಹೆಗಡೆ, ರಾಜೇಶ್ವರಿ ಹೆಗಡೆ, ದಾಕ್ಷಾಯಿಣಿ.ಪಿ.ಸಿ, ಶೊಭಾ ಭಟ್, ರೋಹಿಣಿ ಹೆಗಡೆ, ಗಿರಿಜಾ ಹೆಗಡೆ, ಶಂಕರ ಮಡಿವಾಳ, ರಮೇಶ ಕೆರೆಕೋಣ, ನರಸಿಂಹ ಕೊವೇಸರ, ಶಾಂತಾರಾಮ ಶಿರಸಿ, ಕು. ಪ್ರಥಮ್ ಮತ್ತು ಮಹೇಶ ಹನಕೆರೆ ಇವರುಗಳು ತಂತಮ್ಮ ಕವಿತೆ, ಚುಟುಕುಗಳನ್ನು ವಾಚಿಸಿದರು. ಬಳಿಕ ಕಥಾಕಮ್ಮಟ ನಡೆದು ವಿವಿಧ ಕಥೆಗಾರರು ಕಥಾವಾಚನ ಮಾಡಿದರು ವಿಜಯಾ ಶಾನಭಾಗ, ಭವ್ಯಾ ಹೊಳೆಯೂರು ಮತ್ತು ಯಶಸ್ವಿನಿಮೂರ್ತಿ ಇವರುಗಳು ಕಾರ್ಯಕ್ರಮ ನಿರ್ವಹಿಸಿದರು.
ಮತ್ತು ಎಸ್.ಎಮ್.ಹೆಗಡೆಯವರು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿರು.

Share This
300x250 AD
300x250 AD
300x250 AD
Back to top