Slide
Slide
Slide
previous arrow
next arrow

ಹಿರಿಯ ಯಕ್ಷ ಭಾಗವತ ಕೆ.ಪಿ.ಗೋಳಗೋಡರವರಿಗೆ ಗೌರವ ಸನ್ಮಾನ, ಹಮ್ಮಿಣಿ ಅರ್ಪಣೆ

300x250 AD

ಸಿದ್ದಾಪುರ: ಹೆಗ್ಗರಣಿಯ ಹೊಸ್ತೋಟ ಕಡೆಮನೆ ಬಳಗ ಹಾಗೂ ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ ಹಾಗೂ ನಾದಶಂಕರ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಹೆಗ್ಗರಣಿಯ ಅನ್ನಪೂರ್ಣ ಸಭಾಭವನದಲ್ಲಿ ಏರ್ಪಡಿಸಿದ್ದ ಗೌರವ ಸನ್ಮಾನ ಹಾಗೂ ಯಕ್ಷಗಾನ ಬಯಲಾಟ ಅತ್ಯಂತ ಯಶಸ್ವಿಯಾಗಿ ನಡೆಯಿತು.

ದಿ. ವಿಶ್ವೇಶ್ವರ ಗಣಪತಿ ಭಟ್ ಹಾಗೂ ದಿ. ಗಂಗೂಬಾಯಿ ವಿಶ್ವೇಶ್ವರ ಭಟ್ ಕಡೆಮನೆ ಇವರ ಸ್ಮರಣಾರ್ಥ ವಾರ್ಷಿಕವಾಗಿ ನೀಡಲ್ಪಡುವ ಗೌರವ ಸನ್ಮಾನ ಹಾಗೂ ಹಮ್ಮಿಣಿಯನ್ನು ಹಿರಿಯ ಯಕ್ಷಗಾನ ಭಾಗವತ ಹಾಗೂ ಕೋಟ ಯಕ್ಷಗಾನ ಕೇಂದ್ರದ ಪ್ರಾಚಾರ್ಯ ಕೆ.ಪಿ.ಹೆಗಡೆ ಗೋಳಗೋಡರವರಿಗೆ ನೀಡಲಾಯಿತು.

ಸನ್ಮಾನ ಹಾಗೂ ಬಯಲಾಟ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಶೋಕ್ ಹಾಸ್ಯಗಾರ್ ಮಾತನಾಡಿ, ಯಕ್ಷಗಾನಕ್ಕೆ ಕೆ.ಪಿ. ಹೆಗಡೆಯವರ ಕೊಡುಗೆ ಮತ್ತು ಈ ಸಮಾಜದಲ್ಲಿ ಅವರು ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಸಿ, ಕಲಾವಿದರನ್ನು ರೂಪಿಸಿದ ಕಾರ್ಯವೈಖರಿ ಬಗ್ಗೆ ವಿಶ್ಲೇಷಿಸಿ ಅಭಿನಂದಿಸಿದರು. ಅತಿಥಿಗಳಾಗಿದ್ದ ಜಾನಪದ ಪ್ರಶಸ್ತಿ ಪುರಸ್ಕೃತ ಜಿ.ಎಂ ಭಟ್ ಕೆ ವಿ, ಎನ್.ಆರ್. ಭಟ್ ಧರೆ, ದಿ.ವಿಶ್ವೇಶ್ವರ ಭಟ್ ಕಡೆಮನೆ ಇವರ ಯಕ್ಷಾಭಿಮಾನ ಕುರಿತಾಗಿ ತಿಳಿಸಿದರು. ವೇದಿಕೆಯಲ್ಲಿ ಸಾಲಿಗ್ರಾಮ ಮೇಳದ ಪ್ರಧಾನ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು, ಖ್ಯಾತ ಮದ್ದಲೆ ವಾದಕ ಶಂಕರ್ ಭಾಗವತ್ ಯಲ್ಲಾಪುರ, ಹೆಗ್ಗರಣಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಗುರುಶಾಂತ ಸಿ.ಎಂ.ಉಪಸ್ಥಿತರಿದ್ದರು. ಗೌರವ ಸನ್ಮಾನ ಹಾಗೂ ಹಮ್ಮಿಣಿ ಅರ್ಪಣೆಯ ಪೂರ್ವದಲ್ಲಿ ಜಿ.ಎಂ. ಭಟ್ ಕೋಡಖಂಡ ಸನ್ಮಾನಿತರ ಕುರಿತಾದ ಅಭಿನಂದನಾ ಮಾತನಾಡಿದರೆ, ಲಕ್ಷ್ಮೀಶ ವಿ. ಭಟ್ಟ ಸನ್ಮಾನ ಪತ್ರ ವಾಚಿಸಿದರು.
ಹೊಸತೋಟ ಕಡೆಮನೆ ಬಳಗದ ಹಿರಿಯ ಸದಸ್ಯರಾದ ರಮೇಶ ಭಟ್ ಹಾಗೂ ಲತಾ ಭಟ್, ಶಶಿಕಲಾ ಭಟ್ ಮತ್ತು ಗಣಪತಿ ಭಟ್, ಮಹೇಶ್ ಭಟ್, ಅಮೃತಾ ಭಟ್, ಲಕ್ಷ್ಮೀಶ ಮತ್ತು ಚಿನ್ಮಯಿ ಹಾಗೂ ಕುಟುಂಬದ ಸದಸ್ಯರೆಲ್ಲ ಸೇರಿ ಪ್ರಾಚಾರ್ಯ ಕೆ.ಪಿ. ಹೆಗಡೆ ಗೋಳಗೊಡವರಿಗೆ ಶಾಲು ಹೊದೆಸಿ, ಫಲ-ತಾಂಬೂಲ,ಸ್ಮರಣಿಕೆ ಹಾಗೂ ಹಮ್ಮಿಣಿಯೊಂದಿಗೆ ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಡೆಮನೆ ಕುಟುಂಬದ ಪುರೋಹಿತ, ಹಿರಿಯ ವೈದಿಕರಾದ ವಿ.ವೆಂಕಟರಮಣ ಭಟ್ ಕೋಡಖಂಡ ಅಧ್ಯಕ್ಷೀಯ ಮಾತನಾಡಿ, ಕೆ.ಪಿ.ಹೆಗಡೆ ದಂಪತಿಗಳಿಗೆ ಶುಭಾಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಸನ್ಮಾನಿತರಿಗೆ ಅನೇಕ ಸಾರ್ವಜನಿಕರು ಶಾಲು ಹೊದಿಸಿ ತಮ್ಮ ಗೌರವ ಸಮರ್ಪಿಸಿದ್ದು ಹೃದಯ ಸ್ಪರ್ಶಿಯಾಗಿತ್ತು. ಸನ್ಮಾನಿತ ಕೆ.ಪಿ.ಹೆಗಡೆ ಮಾತನಾಡಿ, ತಮ್ಮ ಯಕ್ಷ ಪಯಣದಲ್ಲಿ ನಡೆದ ಘಟನೆ, ಒಡನಾಟಗಳನ್ನು ವಿವರಿಸುತ್ತಾ ಕೃತಜ್ಞತೆ ಸಲ್ಲಿಸಿದರು.

300x250 AD

ನಂತರದಲ್ಲಿ ಸಂಘಟಿಸಿದ್ದ ಯಕ್ಷಗಾನ ಬಯಲಾಟ ರುಕ್ಮಾಂಗದ ಧರ್ಮಾಂಗದ ಹಿಮ್ಮೇಳದಲ್ಲಿ ಕೆ.ಪಿ. ಹೆಗಡೆ ಗೋಳಗೋಡು, ರಾಮಕೃಷ್ಣ ಹೆಗಡೆ ಹಿಲ್ಲೂರು, ಸಂತೋಷ್ ಕುಮಾರ್ ಆರ್.ಡಿ ಭಾಗವತರಾಗಿ, ಮದ್ದಲೆಯಲ್ಲಿ ಅನಿರುದ್ಧ ವರ್ಗಾಸರ, ಶಂಕರ ಭಾಗವತ ಯಲ್ಲಾಪುರ, ಚಂಡೆಯಲ್ಲಿ ಪ್ರಸನ್ನ ಹೆಗ್ಗಾರ್ ಪಾಲ್ಗೊಂಡರು.

ಮುಮ್ಮೇಳದ ಪಾತ್ರಧಾರಿಗಳಾಗಿ ಗೋಪಾಲ್ ಆಚಾರ್ಯ ತೀರ್ಥಹಳ್ಳಿ, ಶಂಕರ್ ಹೆಗಡೆ ನಿಲ್ಕೋಡು, ಶ್ರೀಧರ್ ಭಟ್ ಕಾಸರಕೋಡು, ಉದಯ ಹೆಗಡೆ ಕಡಬಾಳ, ಮಂದಾರ್ತಿ ಪ್ರಸನ್ನ ಶೆಟ್ಟಿಗಾರ್, ವಿನಯ್ ಭಟ್ ಬೇರೊಳ್ಳಿ, ವಿನಯ್ ಭಂಡಿವಾಳ, ಸುಬ್ರಮಣ್ಯ ಭಟ್ ಹಾಗೂ ಆರಂಭದ ಬಾಲಗೋಪಾಲರಾಗಿ ಸುಮುಖ ಭಟ್, ರೋಹನ್ ಭಟ್ ಹೊಸ್ತೋಟ ಪಾಲ್ಗೊಂಡು ಅಭಿಮಾನಿಗಳಿಗೆ ಯಕ್ಷ ರಸದೂಟ ಬಡಿಸಿದರು. ಸುಬ್ರಾಯ್ ಭಟ್ ನಿರೂಪಿಸಿದರೆ, ಕೊನೆಯಲ್ಲಿ ಸಂಘಟಕರಲ್ಲೊಬ್ಬರಾದ ಕಡೆಮನೆ ಮಹೇಶ್ ಭಟ್ ವಂದಿಸಿದರು.

Share This
300x250 AD
300x250 AD
300x250 AD
Back to top