• Slide
  Slide
  Slide
  previous arrow
  next arrow
 • ಅಪರೂಪದ ಕರಿ ನಾಗರಹಾವು ಪ್ರತ್ಯಕ್ಷ

  300x250 AD

  ಗದಗ: ಉತ್ತರ ಭಾರತದ ರಾಜ್ಯಗಳಲ್ಲಿ ಆಗಾಗ ಗೋಚರಿಸುವ, ವಿಶೇಷವಾಗಿ ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಕರಿ ನಾಗರಹಾವು (ಮಾರ್ಫ್ ಹಾವು) ಗದಗ ಜಿಲ್ಲೆಯ ನರಗುಂದದಲ್ಲಿ ಪತ್ತೆಯಾಗಿದೆ.

  ನರಗುಂದದ ಜ್ಞಾನಮುದ್ರಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಈ ನಾಗರ ಹಾವು ಕಾಣಿಸಿಕೊಂಡಿದೆ. ಈ ಕರಿ ನಾಗರಹಾವು ಸುಮಾರು 5.5 ಅಡಿ ಉದ್ದವಿದ್ದು, ಇದರ ಬಣ್ಣ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು. ಈ ಹಾವು ಕಾಣಿಸಿಕೊಂಡ ತಕ್ಷಣವೇ ಉರಗ ತಜ್ಞ ಮಂಜುನಾಥ ಎಸ್.ನಾಯಕ ಅವರಿಗೆ ಮಾಹಿತಿ ನೀಡಲಾಗಿದ್ದು, ರುದ್ರೇಶ ಜಲಗೇರಿ, ಮುದ್ದಣ್ಣ, ನಾಮದೇವ, ಹನುಮಂತ, ಸಂಭಾಜಿ, ಶಿವು, ನಾಗರಾಜ ಬಸವರಾಜ, ಹಸೇನಸಾಬ, ಉಮೇಶ, ಅಲಿಸಾಬ, ಮಂಜುನಾಥ, ನಿಂಗಪ್ಪ ಹನಸಿ, ರಾಘವೇಂದ್ರ, ಬಹದ್ದೂರ್ ಖಾನ್ ಸಹಕಾರದಲ್ಲಿ ಅವರು ಹಾವನ್ನು ರಕ್ಷಿಸಿ ಸಮೀಪದ ಹೊಲಕ್ಕೆ ಕೊಂಡೊಯ್ದು ಬಿಡಲಾಗಿದೆ.

  ಏನಿದು ಕರಿ ನಾಗರ?: ಭಾರತದ ವಿವಿಧ ಭಾಗಗಳಲ್ಲಿ ಆಯಾ ಭೌಗೋಳಿಕ ಪ್ರದೇಶದ ಆವಾಸಕ್ಕೆ ತಕ್ಕಂತೆ ಸಾಮಾನ್ಯವಾಗಿ ನಾಗರ ಹಾವುಗಳ (ಮಾರ್ಫ್) ದೇಹದ ಚರ್ಮದ ವರ್ಣವು ಗೋಧಿ ಬಣ್ಣ, ಕಂದು ಬಣ್ಣ, ಗಾಢ ಕಂದು ಬಣ್ಣದಿಂದ ಕೂಡಿರುತ್ತದೆ. ಚರ್ಮದ ಬಣ್ಣಕ್ಕೆ ಕಾರಣವಾದ ವರ್ಣದ್ರವ್ಯ ಮೆಲಾನಿನ್‌ನ್ನ ಸ್ರವಿಸುವಿಕೆಯ ಪ್ರಮಾಣದಲ್ಲಿ ವ್ಯತ್ಯಾಸವಾದಾಗ ನಾಗರ ಹಾವುಗಳ ಮೈಬಣ್ಣವು ವ್ಯತ್ಯಾಸವಾಗುತ್ತದೆ. ಮೆಲಾನಿನ್ ವರ್ಣದ್ರವ್ಯವು ಚರ್ಮ, ಕಣ್ಣು ಮತ್ತು ಕೂದಲಿಗೆ ಬಣ್ಣವನ್ನು ಒದಗಿಸುತ್ತದೆ. ಇದಲ್ಲದೆ ಮೆಲಾನಿನ್ ಸೂರ್ಯನಿಂದ ಬರುವವ ನೇರಳಾತೀತ (ಅಲ್ಟ್ರಾವೈಲೆಟ್ ರೇ) ಕಿರಣಗಳಿಂದ ರಕ್ಷಿಸುತ್ತದೆ. ಹಾವುಗಳನ್ನೊಳಗೊಂಡಂತೆ ಈ ವರ್ಣ ದ್ರವ್ಯವು ಅನೇಕ ಪ್ರಾಣಿಗಳಲ್ಲಿ ಮರೆಮಾಚುವಿಕೆಗೆ (ಕ್ಯಾಮೊಫ್ಲಾಜಿ), ಥರ್ಮೋರೆಗ್ಯೂಲೇಷನ್‌ನ (ಉಷ್ಣಗ್ರಾಹಿ) ಕಾರ್ಯವನ್ನು ನಿರ್ವಹಿಸುತ್ತದೆ.

  300x250 AD

  ಮೆಲಾನಿನ್ ವರ್ಣದ್ರವ್ಯದ ಸ್ರವಿಸುವಿಕೆಯು ಹಠಾತ್ ಅನುವಂಶಿಕ ಬದಲಾವಣೆಯಿಂದಾಗಿ ಉಂಟಾಗಿ ಹಾವುಗಳಲ್ಲಿ ಈ ವಿರಳ ವಿದ್ಯಮಾನವು ಅಲ್ಬಿನಿಸ್‌ಂ ಮತ್ತು ಲ್ಯೂಯೋಸಿಸ್ಟಿಕ್ ಹಾವುಗಳ ಜನನಕ್ಕೆ ಕಾರಣವಾಗುತ್ತದೆ. ಈ ವಿದ್ಯಮಾನದ ಹಾವುಗಳ ಆಯುಷ್ಯ ಕಡಿಮೆ ಇರುವುದರಿಂದ ನಿಸರ್ಗದಲ್ಲಿ ಇವು ಬದುಕುಳಿಯುವುದು ತುಂಬಾ ವಿರಳ. ಮೆಲಾನಿನ್ ವರ್ಣದ್ರವ್ಯದ ಸ್ರವಿಸುವಿಕೆ ಹೆಚ್ಚಾದಾಗ ಹಾವುಗಳು ಮೈ ಬಣ್ಣವು ಕಪ್ಪುರೂಪಕ್ಕೆ( ಬ್ಲಾಕ್ ಮಾರ್ಫ್ ಕೋಬ್ರಾ) ತಿರುಗುತ್ತದೆ. ಇಂತಹ ನಾಗರವಾವುಗಳಿಗೆ ಕರಿನಾಗರ ಎನ್ನುವರು. ಈ ವಿದ್ಯಮಾನದ ಕಪ್ಪುವರ್ಣದ ಹಾವುಗಳು ಉತ್ತರ ಭಾರತದ ರಾಜ್ಯಗಳಲ್ಲಿ ಆಗಾಗ ಗೋಚರಿಸುತ್ತವೆ. ಆದರೆ ಕರ್ನಾಟಕದಲ್ಲಿ ಈ ಕರಿನಾಗರ ಹಾವುಗಳು ತೀರಾ ವಿರಳ. ಗೋಚರಿಸಿಕೊಂಡ ಬಗ್ಗೆ ಅಧಿಕೃತವಾಗಿ ದಾಖಲಾದ ಮಾಹಿತಿ ಕೂಡ ಇಲ್ಲ ಎನ್ನುತ್ತಾರೆ ಉರಗ ತಜ್ಞ ಮಂಜುನಾಥ ಎಸ್.ನಾಯಕ.

  ನನ್ನ ಈ ವೃತ್ತಿ ಅನುಭವದಲ್ಲಿ ಕರಿ ನಾಗರಹಾವನ್ನ ಇದು 3ನೇ ಬಾರಿ ನೋಡಿದ್ದು. ಇಂತಹ ಹಾವುಗಳನ್ನು ಹೈಪರ್ ಮೆಲಾನಿಸ್ಟಿಕ್ ಕೋಬ್ರಾ ಎಂತಲೂ ಕರೆಯಬಹುದು. ಯಾವುದೇ ಹಾವು ಇರಲಿ, ಕೊಲ್ಲದೆ ಹತ್ತಿರ ಲಭ್ಯವಿರುವ ಉರಗ ಸಂರಕ್ಷಕರಿAದ ಅವುಗಳನ್ನು ರಕ್ಷಿಸಿ ಅವುಗಳ ಆವಾಸಕ್ಕೆ ಬಿಡಬೇಕು. ಇದು ನಿಸರ್ಗಕ್ಕೆ ನಾವು ತೋರುವ ಗೌರವ ಎಂದು ಅವರು ಈ ವೇಳೆ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top