Slide
Slide
Slide
previous arrow
next arrow

ನ.8ಕ್ಕೆ ಚಂದ್ರ ಗ್ರಹಣ: ಆಚರಣೆ ಹೇಗೆ? ಇಲ್ಲಿದೆ‌ ಮಾಹಿತಿ

300x250 AD

ಶಿರಸಿ: ಕೊಳಗಿಬೀಸ್ ಮಾರುತಿ ದೇವಸ್ಥಾನದ ಪ್ರಧಾನ ಅರ್ಚಕ ವಿ. ಕುಮಾರ ಭಟ್ಟ ನವೆಂಬರ್ 8ರಂದು‌ ನಡೆಯಲಿರುವ ಚಂದ್ರ ಗ್ರಹಣದ ಹಿನ್ನಲೆಯಲ್ಲಿ ಅದರ ಆಚರಣೆ ವಿಧಾನದ ಕುರಿತು ಮಾಹಿತಿ‌ ನೀಡಿದ್ದಾರೆ.
ಅಂದು ಸಂಜೆ 5.58 ರಿಂದ 6.19ರ ವರೆಗೆ ಚಂದ್ರಗ್ರಹಣ ಆಚರಣೆಯ ಪುಣ್ಯ ಕಾಲವಿದ್ದು ಈ ವೇಳೆಯಲ್ಲಿ ಸ್ನಾನ ಮಾಡಿ ಜಪ, ತರ್ಪಣ, ದಾನ ಇತ್ಯಾದಿಗಳಿಂದ ಆಚರಿಸಬೇಕು. ಗ್ರಹಣ ಪೂರ್ವ ದೇವರನ್ನು ಜಲಶಯನ ಮಾಡಬೇಕು ಎಂದು ಸೂಚಿಸಿದ್ದಾರೆ.
ಅಂದು ಬೆಳಿಗ್ಗೆ 9-15ರ ವರೆಗೆ ಭೋಜನದಿಗಳು ಶಾಸ್ತ್ರ ಸಮ್ಮತವಾಗಿ ಮಾಡಬಹುದು. ಅಶಕ್ತರು, ರೋಗಿಗಳು, ಮಕ್ಕಳು, ವೃದ್ದರು ಮಧ್ಯಾಹ್ನ 12-15ರ ವರೆಗೆ ಆಹಾರ ಸೇವಿಸಬಹುದು.

ದೇವಸ್ಥಾನಾದಿಗಳ ದೀಪೋತ್ಸವಗಳನ್ನು ಮೊದಲನೇ ದಿನವೇ ಆಚರಿಸುವುದು, ದೇವರನ್ನು ಜಲಾಧಿವಾಸ ಮಾಡುವ ಪರಿಪಾಠವಿರುವ ಮನೆಯಲ್ಲಿ ಮಧ್ಯಾಹ್ನ ಪೂಜೆಯ ನಂತರ ಜಲಾಧಿವಾಸ ಮಾಡುವುದು. ಗ್ರಹಣ ಮೋಕ್ಷದ ನಂತರ ಶುದ್ಧಿಯಾಗಿ ಪುನಃ ಪೂಜೆ ಮಾಡುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top