• Slide
  Slide
  Slide
  previous arrow
  next arrow
 • ನ.12ಕ್ಕೆ ಹಿಲ್ಲೂರು ಯಕ್ಷಮಿತ್ರ ಬಳಗದ ವಾರ್ಷಿಕೋತ್ಸವ

  300x250 AD

  ಶಿರಸಿ :ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ ವಾರ್ಷಿಕೋತ್ಸವದ ಪ್ರಯುಕ್ತ ತಾಳಮದ್ದಲೆ-ಸಮ್ಮಾನ-ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ನ.12 ರಂದು ಅಪರಾಹ್ನ 2:30 ರಿಂದ ನಗರದ ಟಿ.ಎಮ್.ಎಸ್ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.

  ಮಧ್ಯಾಹ್ನ 2.3೦ರಿಂದ ಯಕ್ಷಗೆಜ್ಜೆ (ರಿ) ಶಿರಸಿ ಇವರಿಂದ ‘ಕೃಷ್ಣ ಸಂಧಾನ – ಕರ್ಣಭೇದನ’ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ನಂತರದಲ್ಲಿ ದಿ. ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಭಾಗವತರು ವಿದ್ವಾನ್ ಗಣಪತಿ ಭಟ್ಟ, ಮೊಟ್ಟೆಗದ್ದೆ ಇವರಿಗೆ ಗೌರವ ಸಮ್ಮಾನ, ಯಕ್ಷಗಾನ ಕಲಾವಿದರಾದ ರಘುಪತಿ ನಾಯ್ಕ ಅವರಿಗೆ ಸಹಾಯಧನ ಮತ್ತು ವಿನಾಯಕ ಗಣಪತಿ ಹೆಗಡೆ (ಊದಬತ್ತಿ ವಿನಾಯಕ), ಶಿರಸಿ ಇವರಿಗೆ ಪ್ರೋತ್ಸಾಹ ಸಮ್ಮಾನ ನಡೆಯಲಿದೆ.

  300x250 AD

  ತದನಂತರ ‘ಭಕ್ತ ಸುಧನ್ವ’ ಯಕ್ಷಗಾನ ನಡೆಯಲಿದ್ದು ಹಿಮ್ಮೇಳದಲ್ಲಿ ವಿದ್ವಾನ್‌ ಗಣಪತಿ ಭಟ್ಟ ಮೊಟ್ಟೆಗದ್ದೆ , ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಿರುದ್ಧ ಹೆಗಡೆ ವರ್ಗಾಸರ, ಪ್ರಸನ್ನ ಭಟ್ಟ ಹೆಗ್ಗಾರು ಮತ್ತು ಮುಮ್ಮೇಳನದಲ್ಲಿ ಅರ್ಜುನ ಪಾತ್ರಧಾರಿಯಾಗಿ ಶಂಕರ ಹೆಗಡೆ ನೀಲ್ಕೋಡು, ಸುಧನ್ವ ಪಾತ್ರಧಾರಿಯಾಗಿ ಈಶ್ವರ ನಾಯ್ಕ ಮಂಕಿ, ಪ್ರಭಾವತಿ ಪಾತ್ರಧಾರಿಯಾಗಿ ನಾಗರಾಜ ಭಟ್ಟ ಕುಂಕಿಪಾಲ ,ಕೃಷ್ಣನ ಪಾತ್ರದಲ್ಲಿ ಸನ್ಮಯ್ ಭಟ್ಟ ಮಲವಳ್ಳಿ, ಪ್ರದ್ಯುಮ್ನನಾಗಿ ಕಾರ್ತಿಕ ಭಟ್ಟ ಕಣ್ಣಿಮನೆ ಮತ್ತು ವೃಷಕೇತು ಪಾತ್ರದಲ್ಲಿ ದೀಪಕ ಭಟ್ಟ ಕುಂಕಿ ಅಭಿನಯಿಸಲಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಕಲಾಭಿಮಾನಿಗಳು ಬಂದು ಕಾರ್ಯಕ್ರಮ ಯಶಸ್ವಿಯಾಗಿಸುವಂತೆ ಹಿಲ್ಲೂರು ಯಕ್ಷಮಿತ್ರ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top