ಯಲ್ಲಾಪುರ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ – ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತಾಲೂಕು ಪಂಚಾಯತ, ಯಲ್ಲಾಪುರ, ಏಕದಂತ ಸಂಜೀವಿನಿ ಗ್ರಾ. ಪಂ. ಮಟ್ಟದ ಒಕ್ಕೂಟ ಕಿರವತ್ತಿ ಇವರ ಸಹಯೋಗದೊಂದಿಗೆ ನ.6 , ರವಿವಾರದಂದು, ಯಲ್ಲಾಪುರದ ತಾಲೂಕು ಪಂಚಾಯತ ಆವರಣದಲ್ಲಿ ‘ಸಂಜೀವಿನಿ ಮಾಸಿಕ ಸಂತೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಎನ್.ಆರ್.ಎಲ್.ಎಂ. (ಸಂಜೀವಿನಿ) ಯೋಜನೆಯಡಿ ರೂಪುಗೊಂಡಂತಹ ಮಾಸಿಕ ಸಂತೆ ಕಾರ್ಯಕ್ರಮವು ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವ-ಸಹಾಯ ಸಂಘದ ಮಹಿಳೆಯರು ಸ್ಥಳೀಯವಾಗಿ ಉತ್ಪಾದಿಸುವ ಉತ್ಪನ್ನಗಳಿಗೆ ಯಾವುದೇ ಮಧ್ಯವರ್ತಿಗಳಿಗೆ ಕಮಿಷನ್ ಪಾವತಿಸದೆ ನೇರವಾಗಿ ಗ್ರಾಹಕರಿಗೆ ತಲುಪಿಸಲು ಸೂಕ್ತ ಮಾರುಕಟ್ಟೆಯಾಗಿದೆ.ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಉತ್ತಮ ಅವಕಾಶ ಕಲ್ಪಸಿಕೊಡಲಾಗಿದ್ದು ಸಾರ್ವಜನಿಕರು ಕಾರ್ಯಕ್ರಮದ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.