• first
  second
  third
  Slide
  Slide
  previous arrow
  next arrow
 • ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನ

  300x250 AD

  ಕಾರವಾರ : ಭಾರತ ಸರ್ಕಾರದ ಯೋಜನೆಯಾದ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನ (OSP) ಅಡಿಯಲ್ಲಿ 2022-23ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಸರಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಸಿಖ್), ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ (1 ರಿಂದ 10 ನೇ ತರಗತಿ, ಮೆಟ್ರಿಕ್ ನಂತರದ (ಪಿ. ಯು. ಸಿ ಯಿಂದ ಪಿ.ಎಚ್. ಡಿ ವರೆಗಿನ) ಹಾಗೂ ಮೆರಿಟ್ ಕಂ ಮೀನ್ಸ್ (ತಾಂತ್ರಿಕ ವೃತ್ತಿಪರ ಕೋರ್ಸ್), ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿ ಅ.31 ಕೊನೆ ದಿನಾಂಕವಾಗಿ ನಿಗದಿಪಡಿಸಲಾಗಿತ್ತು ಈಗ ಆ ಅವದಿಯನ್ನು ವಿಸ್ತರಿಸಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ನವೆಂಬರ್ 15, ಹಾಗೂ ಮೆಟ್ರಿಕ್ ನಂತರದ ಮತ್ತು ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿವೇತನಕ್ಕೆ ನವೆಂಬರ್ 30 ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

  ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು https://scholarships.gov.in ಹಾಗೂ ಇಲಾಖೆಯ ವೆಬ್‌ಸೈಟ್ https://dom.karnataka.gov.in ಇಲಾಖೆಯTwitter_id@WelfareUttaraಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರ, ಇಲ್ಲವೇ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ದೂರವಾಣಿ ಸಂಖ್ಯೆ08382-220336/8277799990ಇಲ್ಲಿಗೆ ಸಂಪರ್ಕಿಸುವಂತೆ ಜಿಲ್ಲಾ ಅಧಿಕಾರಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top