ಬೆಂಗಳೂರು : ನಾಲ್ವಡಿ ಕೃಷ್ಣರಾಜ ಒಡೆಯರ್ ಘಟಿಕೋತ್ಸವ ಡಿಪ್ಲೋಮಾ 2022 ನವಂಬರ್ 2 ರಂದು ಬ್ಯಾಂಕ್ವೆಟ್ ಹಾಲ್ ವಿಧಾನಸೌಧ ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ಜರುಗಿತು.
ಈ ಸಮಾರಂಭದಲ್ಲಿ 45 ವಿವಿಧ ಕೋರ್ಸ್ ನಲ್ಲಿ ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಚಿವರಾದ ಸಿ. ಅಶ್ವಥ್ ನಾರಾಯಣ್ ರವರು ಡಿಪ್ಲೋಮಾ ಪದವಿ ಪ್ರಮಾಣ ಪತ್ರ ಹಾಗೂ ಚಿನ್ನ, ಬೆಳ್ಳಿ ,ಕಂಚಿನ ಪದಕ ನೀಡಿ ಗೌರವಿಸಿದರು.
ಈ ಸಮಾರಂಭದಲ್ಲಿ ಮುರುಡೇಶ್ವರ ಆರ್. ಎನ್. ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ನ ಸಿರಾಮಿಕ್ ಟೆಕ್ನಾಲಜಿ ವಿಭಾಗಕ್ಕೆ ಮೂರು ರಾಂಕುಗಳು ದೊರೆತಿದ್ದು ,ಚಿನ್ನದ ಪದಕದೊಂದಿಗೆ ಪ್ರಥಮ ರಾಂಕ್ ಪಡೆದ ರೂಜಾರಿಯೋ ಡಿಸೋಜ, ಬೆಳ್ಳಿಯ ಪದಕದೊಂದಿಗೆ ಎರಡನೇ ರಾಂಕ್ ಪಡೆದ ಸಿದ್ದಲಿಂಗ, ಹಾಗೂ ಕಂಚಿನ ಪದಕದೊಂದಿಗೆ ಮೂರನೇ ರ್ಯಾಂಕ್ ಪಡೆದ ಚರಣ್ ರಾಜ್ ಎಸ್,
ಈ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ಜೆ .ಎಸ್. ಡಬ್ಲ್ಯೂ ಸ್ಟೀಲ್ ಕಂಪನಿಯಲ್ಲಿ, ಮತ್ತೊಬ್ಬರು ಹೈದರಾಬಾದ್ ಗ್ಲಾಸ್ ಕಂಪನಿಯಲ್ಲಿ ಕೆಲಸ ದೊರೆತಿರುತ್ತದೆ ಎಂದು ಉದ್ಯೋಗಾಧಿಕಾರಿಗಳು/ ಸಿರಾಮಿಕ್ ವಿಭಾಗದ ಮುಖ್ಯಸ್ಥರು ಹಾಗೂ ಉಪ ಪ್ರಾಚಾರ್ಯರು ಆದ ಕೆ. ಮರಿಸ್ವಾಮಿಯವರು ಮಾಹಿತಿ ನೀಡಿದ್ದಾರೆ. ಪಾಲಿಟೆಕ್ನಿಕ್ ಸಂಸ್ಥೆಯ ಪ್ರಾಚಾರ್ಯರಾದ ಸಂತೋಷ್ ಆರ್. ಎ. ಆಡಳಿತಾ ಧಿಕಾರಿಗಳಾದ ದಿನೇಶ್ ಗಾವ್ಕರ್ ,ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಹರ್ಷವನ್ನ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.