Slide
Slide
Slide
previous arrow
next arrow

ಅರಣ್ಯ ಅತಿಕ್ರಮಣದಾರರು ಭಯಪಡುವ ಅವಶ್ಯಕತೆ ಇಲ್ಲ: ಕಾಗೇರಿ

300x250 AD

ಸಿದ್ದಾಪುರ: ಈ ಹಿಂದೆ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿ ಜೀವನ ಸಾಗಿಸುತ್ತಿರುವಂಥವರಿಗೆ ಅರಣ್ಯ ಇಲಾಖೆಯಿಂದ ಯಾವುದೇ ತೊಂದರೆ ಆಗದಂತೆ ಹಾಗೂ ಆ ಜಾಗವನ್ನು ಅತಿಕ್ರಮಣದಾರರಿಗೆ ಮಂಜೂರಿಯಾಗುವಂತೆ ಸರಕಾರದ ಮಟ್ಟದಲ್ಲಿ ಚರ್ಚಿಸಿ, ಸುಪ್ರೀಂ ಕೋರ್ಟ್ನಲ್ಲಿ ಅಫಿಡ್‌ವಿಟ್ ಸಲ್ಲಿಸಲು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವುದೇ ಅರಣ್ಯ ಅತಿಕ್ರಮಣದಾರರು ಈ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ತಾಲೂಕಿನ ಕೊರ್ಲಕೈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜನಪ್ರತಿನಿಧಿಗಳು, ರಾಜ್ಯ- ಕೇಂದ್ರ ಸರ್ಕಾರ ಅತಿಕ್ರಮಣದಾರರ ಹಿತ ಕಾಪಾಡಲು ಬದ್ಧವಾಗಿದೆ. ಹೊಸ ಅತಿಕ್ರಮಣವನ್ನು ಯಾರೂ ಮಾಡಬಾರದು, ಅರಣ್ಯ ಅತಿಕ್ರಮಣದಾರರಿಗೆ ಯಾವುದೇ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ಅರಣ್ಯ ಅತಿಕ್ರಮಣದಾರರು ಯಾರೂ ಕೂಡ ಆತಂಕ ಪಡುವುದು ಬೇಡ ಎಂದು ತಿಳಿಸಿದರು.
ನನ್ನ ವಿಶೇಷವಾದ ಪ್ರಯತ್ನದಿಂದ ಅರಣ್ಯ ಅತಿಕ್ರಮಣ ಜಾಗದಲ್ಲಿ ಗುಡಿಸಲು ಕಚ್ಚಾ ಮನೆಗಳನ್ನು ನಿರ್ಮಿಸಿಕೊಂಡು ಪಂಚಾಯತದಿಂದ ಮನೆ ನಂಬರ್ ಪಡೆದು ಮನೆಕರ ತುಂಬುತ್ತಿರುವ ಬಡವರಿಗೆ ಮನೆ ನಂಬರ್ ಆಧಾರದಲ್ಲಿ ಬಸವ ವಸತಿ ಅಥವಾ ಇತರೆ ಯೋಜನೆಯಡಿಗಳಲ್ಲಿ ಮನೆ ಮಂಜೂರಿ ಮಾಡುವಂತೆ ಆದೇಶ ಮಾಡಲಾಗಿದೆ. ಈ ಕುರಿತು ಸರಕಾರದ ಗಮನಕ್ಕೆ ತಂದು ಸರಕಾರದಿಂದ ಆದೇಶ ಮಾಡಿಸಲಾಗಿದೆ. ಇಂದು ಎಲ್ಲ ಬಡವರಿಗೆ ಸೂರು ಕಲ್ಪಿಸಲು ಅನುಕೂಲವಾಗಿದೆ. ಅಲ್ಲದೆ ವಿಶೇಷ ಪ್ರಯತ್ನದಿಂದ ವಸತಿ ರಹಿತರಿಗೆ ಮನೆ ಕಲ್ಪಿಸಲು ವಸತಿ ಸಚಿವರ ಜೊತೆ ಈ ಕುರಿತು ಮಾತನಾಡಿ, ಶಿರಸಿ- ಸಿದ್ದಾಪುರ ಕ್ಷೇತಕ್ಕೆ5000 ಮನೆಗಳನ್ನು ಮಂಜೂರಿ ಮಾಡಿಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ನಟರಾಜ ಮೈಲಪ್ಪ ನಾಯ್ಕ, ಉಪಾಧ್ಯಕ್ಷ ಸುಮನಾ ಹರಿಜನ, ಸದಸ್ಯರಾದ ಮಂಜಪ್ಪ ಭದ್ರನ್, ಮಂಜುನಾಥ ಮಡಿವಾಳ, ಕಲಾವತಿ ನಾಯ್ಕ, ಪ್ರಮುಖರಾದ ತಿಮ್ಮಪ್ಪ ಹೆಗಡೆ ಮುಸವಳ್ಳಿ, ಗುರುಮೂರ್ತಿ ಹೆಗಡೆ, ಶ್ರೀನಿವಾಸ ಹೆಗ್ಗೆಕೊಪ್ಪ, ತಿಮ್ಮಪ್ಪ ಜಿಡ್ಡಿ ಮೊದಲಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top