• first
  second
  third
  Slide
  previous arrow
  next arrow
 • ಕಾಣಿಕೆ ಹುಂಡಿ ಕಳವು ಮಾಡಿದ್ದವರ ವಿಚಾರಣೆ

  300x250 AD

  ಅಂಕೋಲಾ: ತಾಲೂಕಿನ ಹಿಲ್ಲೂರಿನ ಹುಲಿದೇವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ಳತನ ಮಾಡಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
  ಹುಬ್ಬಳ್ಳಿಯ ಉಣಕಲ ಗ್ರಾಮದ ಆನಂದ ಹೂಗಾರ, ಹುಬ್ಬಳ್ಳಿ ಮಾಧವನಗರದ ಬಸವರಾಜ ಹೂಡೆದ ಎಂಬುವವರೆ ಕಳ್ಳತನ ಪ್ರಕರಣದಲ್ಲಿ ವಶಕ್ಕೆ ಪಡೆದ ಆರೋಪಿಗಳು. ಇನ್ನೋರ್ವ ಆರೋಪಿ ಧಾರವಾಡ ರಾಜೀವಗಾಂಧಿ ನಗರದ ವಿಜಯ ಅಣ್ಣಿಗೇರಿ ತಲೆಮರೆಸಿಕೊಂಡಿದ್ದಾನೆ.
  ಹುಬ್ಬಳ್ಳಿಯ ಕಳ್ಳತನ ಪ್ರಕರಣವೊಂದರಲ್ಲಿ ಹುಬ್ಬಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದ ಈ ಆರೋಪಿತರನ್ನ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅಂಕೋಲಾ, ಯಲ್ಲಾಪುರ ಮತ್ತಿತರ ಕಡೆ ಕಳ್ಳತನ ಮಾಡಿರುವ ಕುರಿತು ಮಾಹಿತಿ ನೀಡಿದ್ದಾರೆ. ಬಳಿಕ ಅಂಕೋಲಾ ಪೊಲೀಸರು ಆರೋಪಿತರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಹಿಲ್ಲೂರಿನ ಹುಲಿದೇವರ ದೇವಸ್ಥಾನದ ಕಳುವು ಮಾಡಿರುವ ಕುರಿತು ಮಾಹಿತಿ ನೀಡಿದ್ದಾರೆ.
  ಆರೋಪಿತರಿಂದ 7 ಸಾವಿರ ಹಣವನ್ನು ಜಪ್ತು ಪಡಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ದೂರಿನನ್ವಯ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು 20ಸಾವಿರ ಹಣ ಕಳ್ಳತನವಾಗಿದೆ ಎಂದು ತಿಳಿದಿದೆ. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  300x250 AD
  Share This
  300x250 AD
  300x250 AD
  300x250 AD
  Back to top