• first
  second
  third
  Slide
  Slide
  previous arrow
  next arrow
 • ಬಾಲಕರು ನಾಪತ್ತೆ; ಪ್ರತ್ಯೇಕ ಪ್ರಕರಣ ದಾಖಲು

  300x250 AD

  ದಾಂಡೇಲಿ: ತಾಲ್ಲೂಕಿನ ವಿಟ್ನಾಳ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ನಾಪತ್ತೆಯಾಗಿರುವ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
  16 ವರ್ಷ ವಯಸ್ಸಿನ ಆದಿತ್ಯ ಎಂಬಾತ ನಾಪತ್ತೆಯಾದ ಬಾಲಕನಾಗಿದ್ದಾನೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿರುವ ಈತ 4.5 ಅಡಿ ಎತ್ತರ, ಕಪ್ಪು ಮೈ ಬಣ್ಣ, ಸಾಧರಣ ಮೈಕಟ್ಟು, ಗುಂಗುರು ಕೂದಲನ್ನು ಹೊಂದಿದ್ದಾನೆ. ಈತನನ್ನು ಯಾರಾದರೂ ನೋಡಿದ್ದಲ್ಲಿ, ಈತನ ಬಗ್ಗೆ ಏನಾದರೂ ಮಾಹಿತಿ ಇದ್ದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
  ಮುಂಡಗೋಡ ವರದಿ: ಪಟ್ಟಣದ ವಿವೇಕಾನಂದ ನಗರದ ಗೌತಮ ಗೌಡರ ಎನ್ನುವ 15 ವರ್ಷದ ಬಾಲಕ ಕಾಣೆಯಾಗಿದ್ದಾನೆ. ಲೊಯೋಲ ಕಾಲೇಜಿಗೆ ಹೋಗಲು ಮುಂಡಗೋಡ ಬಸ್ ನಿಲ್ದಾಣದಲ್ಲಿ ಬೈಕ್‌ನಲ್ಲಿ ಇಳಿದ ಗೌತಮ, ಕಾಲೇಜಿಗೂ ಹೋಗದೆ ಮರಳಿ ಮನೆಗೂ ಬರದೆ ಕಾಣೆಯಾಗಿದ್ದಾನೆಂದು ಬಾಲಕನ ತಂದೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ

  300x250 AD
  Share This
  300x250 AD
  300x250 AD
  300x250 AD
  Back to top