ಅಂಕೋಲಾ: ದೇಶದ ಸ್ವಾಭಿಮಾನ, ರಾಷ್ಟ್ರೀಯತೆಯನ್ನು ಹಂಗಿಸುವವರು ದೊಡ್ಡ ಲೇಖಕರಾಗಿ ಹೊರಹೊಮ್ಮುತ್ತಿದ್ದಾರೆ. ಅದು ನಮ್ಮ ದೌರ್ಭಾಗ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಷಾದ ವ್ಯಕ್ತಪಡಿಸಿದರು.
ಅವರು ಪಟ್ಟಣದ ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಾರ್ಡೋಲಿ ಪ್ರತಿಷ್ಠಾನ ಆಶ್ರಯದಲ್ಲಿ ಹಮ್ಮಿಕೊಂಡ ಸಾಹಿತಿ ವಿಠ್ಠಲ ಗಾಂವಕರ ರಚಿತ ಕನ್ನಡ ನುಡಿತೇರು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಇಂದಿನ ರಾಜಕೀಯ ಡೋಲಾಯಮಾನ ಸ್ಥಿತಿಯ ನಡುವೆ ಸಾಹಿತ್ಯಕ್ಕೆ ಸೇಟೆದು ನಿಲ್ಲುವ ಶಕ್ತಿ ಇದೆ. ನಾಗರೀಕ ಸಮಾಜ ನಿರ್ಮಾಣ ಮಾಡಿ ಸಮಾಜದ ಓರೆಕೊರೆ ತಿದ್ದುವ ಶಕ್ತಿ ಸಾಹಿತ್ಯಕ್ಕಿದೆ. ನಿಯಮವನ್ನು ಮೀರಿ ಪ್ರಜಾತಂತ್ರ ವ್ಯವಸ್ಥೆಗೆ ದಕ್ಕೆ ತರುವಂತವರನ್ನು ನಿಯಂತ್ರಣ ಮಾಡುವ ಶಕ್ತಿ ಸಾಹಿತ್ಯದಲ್ಲಿದೆ. ಇವೆಲ್ಲವು ಸ್ಪುಟವಾಗಬೇಕಾದರೆ ಸಾಹಿತ್ಯದ ನಿಲುವು ವೈಚಾರಿಕ ವಿಚಾರ ಮೊದಲು ಗಟ್ಟಿಯಾಗಬೇಕು. ಕಂಡದನ್ನು ಕಂಡಂತೆ ಹೇಳು ಶಕ್ತಿ ಸಾಹಿತ್ಯದಲ್ಲಿ ಆಗಬೇಕು. ಇಂದು ಕನ್ನಡವನ್ನು ಉಳಿಸಲು ಬೆಳೆಸಲು ಸರಕಾರ ಕಠೀಣ ನಿರ್ದಾರ ತೆಗೆದುಕೊಳ್ಳುವುದು ಅನಿರ್ವಾವಾಗಿದೆ. ವಿಠ್ಠಲ ಗಾಂವಕರರು ಸಮಾಜ ಬಯಸುವಂತಹ ಕೃತಿಗಳ ಮೂಲಕ ಎಲ್ಲೆಡೆ ಪರಿಚಿತರಾಗುತ್ತಿದ್ದಾರೆ. ಇನ್ನೂ ಅನೇಕ ಸಮಾಜಮುಖಿ ಕೃತಿಗಳು ಅವರಿಂದ ಬರಲಿ ಎಂದು ಶುಭ ಹಾರೈಸಿದರು.
ಶಾಸಕಿ ರೂಪಾಲಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕ ಎಸ್.ವಿ.ವಸ್ತದ್ ಕೃತಿ ಪರಿಚಯ ಮಾಡಿದರು. ಪುರಸಭಾ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ವೇದಿಕೆಯಲ್ಲಿದ್ದರು. ಕೃತಿಕಾರ ಸಾಹಿತಿ ವಿಠ್ಠಲ ಗಾಂವಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಚಾರ್ಯ ವಿನಾಯಕ ಹೆಗಡೆ ಸ್ವಾಗತಿಸಿದರು, ಉಪನ್ಯಾಸಕ ಮಂಜುನಾಥ ಇಟಗಿ ವಂದಿಸಿದರು, ಬಾರ್ಡೋಲಿ ಪ್ರತಿಷ್ಠಾನದ ಸದಸ್ಯ ಮಹಾಂತೇಶ ರೇವಡಿ ಕಾರ್ಯಕ್ರಮ ನಿರೂಪಿಸಿದರು.